ಶಶಿಕಾಂತ ಪಿ ದೇಸಾಯಿ   (ಏನು ತಂದೆ?)
2.4k Followers · 755 Following

read more
Joined 17 August 2017


read more
Joined 17 August 2017

ಕೆಂಪು ಕಣ್ಣು
ರಕ್ತ ಇನ್ನೇನು ಚಿಮ್ಮಬಹುದು
ರಕ್ತನಾಳಗಳ ಘೋರ ದರ್ಶನ
ಮುಖವೆಲ್ಲ ಸುಟ್ಟಂತೆ
ಮೂಗಿನಿಂದ ಬಿಸಿಗಾಳಿ
ಮೂಗಿನೊಳಗೆ ಸುಡು ಸುಡು ಗಾಳಿ
ಅಳ್ನೆತ್ತಿ ಉರಿದಂತೆ
ತಲೆ ಬುರುಡೆ ಬಿರಿದಂತೆ
ಕೆಂಡಗಳು ಆಕಾಶದಿಂದುದುರಿ
ಮೈಗೆ ಮುತ್ತಿದರೂ ಸಹ
ನಗುತ್ತ ಬದುಕಿಹರೆಂದರೆ!
ಕಲಬುರಗಿ ಊರಿನವರೇ,
ಸೂರ್ಯನೇ ಸೋತ.

-



ಮೂಕಹಕ್ಕಿಯಾದ ನಾ ಏನಂತ ಚಿಂವಗುಟ್ಟಲಿ
ಚಿಕ್ಕ ಗುರುತನ್ನೂ ಉಳಿಸದೇ ಎಲ್ಲಿ ಹಾರಿಹೋದೆ
ಸಪ್ತಸಾಗರಗಳಾಚೆಗೆ ಹಾರಾಡಿ ಹುಡುಕಲೂ ಸಹ
ರೆಕ್ಕೆಗಳಿಗೆ ಬಲವಿಲ್ಲ, ಕಣ್ಣುಗಳಲ್ಲೂ ಹೊಳಪಿಲ್ಲ
ಇದ್ದ ಜಾಗಕ್ಕೆ ಬಂದು ತುತ್ತು ತುರುಕಿ ಹೋಗುವ
ಆ ನೆನಪುಗಳಲ್ಲೇ ಹಸಿವೂ ಬಹುಶಃ ಸತ್ತಿದೆ
ಗಾಳಿಗೆ ಸಿಕ್ಕ ನಿನ್ನ ಪುಕ್ಕಗಳ ಬಂದಾವು ಎಂಬ
ನಿರೀಕ್ಷೆಯಲ್ಲಿ ಜೀವ ಹಿಡಿದದ್ದೇ ವೃತವಾಗಿದೆ.

-



ಜಗತ್ತು ಕಿವುಡಾಗಿದೆ
ನೀನುಲಿಯಲು,
ವಿಶ್ವದನೇಕರಲ್ಲಿ
ನೀನೇ ಸಂಗಾತಿ,
ಮಾತು ಕಡಿಮೆ
ಮುತ್ತಿಗೆ ಬರವಿಲ್ಲ,
ದೂರವಿದ್ದರೂ
ಹತ್ತಿರವಿರೋಣ,
ಹತ್ತಿರವಿದ್ದಾಗ
ಮೌನಕ್ಕೆ ಜಾರೋಣ.

-



ಎಲ್ಲವೂ
ಗೊತ್ತಿದೆ ಎನ್ನೋ
ಹುಂಬತನವು, ಜಾಣರೊಂದಿಗೆ ವಾಗ್ವಾದಕ್ಕೆ
ಇಳಿಯಲು ಮುಹೂರ್ತ ಹುಡುಕಿ ಬಳಲುತ್ತದೆ.

-



ನಿನ್ನ ಮೇಲೆ ದ್ವೇಷ
ಸಾಧಿಸೋ ಅನೇಕರಲ್ಲಿ
ಈ ಹೂವುಗಳ ಪಾತ್ರ
ಬಹಳಾಗಿದೆ ನೋಡು,
ನಿನ್ನನ್ನು ನಾ ಅದೆಷ್ಟು
ಬಣ್ಣಿಸಿದರೂ ಕೇಳದೇ
ಹಠಕ್ಕೆ ನಿಂತಂತಿವೆ,
ನಕ್ಕು ಬಿಡು ಚೆಲುವೆ
ಉದುರುತ್ತವೆ ಪಕಳೆಗಳು.

-



ಹೃದಯದೊಳು
ನೀ ಕೂಡಿಟ್ಟ
ಮನದಾಳದಿ
ನಾ ಬಚ್ಚಿಟ್ಟ
ಪರಿಧಿಯ ದಾಟಿ
ಹೊರಬಾರದ
ಭಾವನೆಗಳು
ಉಸಿರುಗಟ್ಟಿ ಸಾಯದೇ
ನಮ್ಮ ಉಸಿರಿನಲ್ಲಿ
ಜೀವಂತವಾಗಿವೆ
ಪರಸ್ಪರ ಅರಿವಿಗೆ
ಬಂದರೆ ಜೀವಿಸಲಿ ಅವು
ನಾವಾಗಿಯೇ
ಕೊಲೆಗಡುಕರಾಗಿ
ಶಿಕ್ಷೆ ಅನುಭವಿಸುವುದು
ಬೇಡ ಎಂದರೆ
ಹೃದಯಕ್ಕೊರಗು.

-



ದಿನಗಳುರುಳಿದರೂ
ಅಳಿಯದ ನೆನಪುಗಳು,
ಮಾಸಿದರೇನಂತೆ
ಸವೆಯದೇ ಇರುವ ಕುರ್ಚಿ?
ನಿತ್ಯವೂ ಘಮಲೇರಿಸೋ
ಆ ಹೂವುಗಳು, ನೀ ಬರದಿರೆ
ಬಾಡಿ ಅಳುತ್ತವೆ,
ಅವುಗಳ ಸಂತೈಸುವುದೇ
ನಿತ್ಯ ಸವಾಲಾಗಿದೆ ನೋಡು,
ನಾನಂತೂ ಕಂಬನಿಗಳ
ಕೊಂದು ಹಾಕಿರುವೆ,
ಹೂವುಗಳ ಅಳು ಕೊಲ್ಲಲಾಗದು.

-



ಒಲವಿನ ಓಲೆಯೊಂದ ಬರೆಯಲು ಕುಳಿತಾಗ
ನಿನ್ನ ಕಿವಿಯೋಲೆಯಂದವೇ ಮನದ ತುಂಬ,
ಪದಗಳ ಗೀಚಲು ಲೇಖನಿಯ ಮುಷ್ಕರ
ಇನ್ನೊಂದೆಡೆ ಚಂಚಲ ಚಿತ್ತದ್ದೇ ಹುಚ್ಚಾಟ,
ಕೊಂಡು ತಂದಾಗ ಅದರಲ್ಲೇನೂ ಇರಲಿಲ್ಲ
ನಿನ್ನ ಕಿವಿಯನ್ನಲಂಕರಿಸಿದಾಗಲೇ ಈ ಆಟ.

-



ಹೊರಡುವ ಮುನ್ನ
ಕಾರಣ ಹೇಳಿ ಹೋಗು,
ನೆನಪುಗಳ ತುಣುಕುಗಳು
ನಡೆದ ಹಾದಿಯಲ್ಲಿ
ಬಿಕ್ಕಿ ಅಳುತ್ತಿವೆ,
ಅವುಗಳ ಸಂತೈಸಿ
ಒಮ್ಮೆ ಮುತ್ತಿಕ್ಕು,
ಭಾರವೇನಿಲ್ಲ ಅವು
ಬಹಳ ಹಗುರಾಗಿವೆ
ಬಳಿದು ಚೀಲದಲ್ಲಿ ತುಂಬು,
ಪ್ರೀತಿ ಸತ್ತಿರಬಹುದು
ನೆನಪುಗಳಂತೂ ಜೀವಂತ
ಅಲ್ಲಿ ನಾನೂ ಜೀವಂತ.

-



ಮನದ ಅಂಗಳದ ತುಂಬ
ನಿನ್ನ ನಗೆಯ ಬೆಳದಿಂಗಳ
ಹಾಲಿನಂಗ ಚೆಲ್ಲೈತಿ ನೋಡಿಲ್ಲಿ,
ಯಾವ ಕಲ್ಮಶ ಇಲ್ಲ ಅದರೊಳಗ
ಶುಭ್ರವಾಗಿಯೇ ಇದೆ ನೋಡಿಲ್ಲಿ
ನಿನ್ನ ಮನಸ್ಸಿನಂಗೇ ಐತಿ.

-


Fetching ಶಶಿಕಾಂತ ಪಿ ದೇಸಾಯಿ Quotes