shivu shiku   (ಶಿವು ಕುದೇರು...✍️)
661 Followers · 324 Following

read more
Joined 25 December 2019


read more
Joined 25 December 2019
6 FEB 2023 AT 7:16

ಮನುಷ್ಯ ಸಾಧನೆಗಳಿಂದಷ್ಟೆ ಅಲ್ಲ ತಪ್ಪುಗಳಿಂದ ಹೆಚ್ಚು ಗುರುತಿಸಲ್ಪಡುತ್ತಾನೆ,
ಅದ್ದರಿಂದ ಪ್ರಚಾರದ ಹುಚ್ಚು ಹಿಡಿಸಿಕೊಳ್ಳಬೇಡ....

-


11 NOV 2022 AT 16:33

ಅಪ್ಪ ಹೇಳದೆ ಕೇಳದೆ ಕೆಲವು ಜವಾಬ್ದಾರಿಗಳನ್ನ ಬಿಟ್ಟು ಹೋಗ್ತಾನೆ ಆ ಜವಾಬ್ದಾರಿಯನ್ನು ನಾವು ಒಪ್ಪಿಕೊಳ್ಳುವುದು ಮತ್ತು ಅದನ್ನು ಪೂರ್ಣಗೊಳಿಸುವವರೆಗೂ ಅಡೆತಡೆಗಳನ್ನ ದಾಟಿ ನಿರ್ವಹಿಸುವುದೇ ಅಪ್ಪನಿಗೆ ತೋರುವ ಗೌರವ & ಅವರ ಮೇಲಿನ ಪ್ರೀತಿಯೂ ಆಗಿರುತ್ತದೆ...

ಹೀಗೆ ವೈಕ್ಯೂ ಜೋಗಿಯೂ ತನ್ನ ಸಾಹಿತ್ಯ ಕ್ಷೇತ್ರದ ಪಯಣವನ್ನು ಕೊನೆಗೊಳಿಸುವ ಮುನ್ನವೇ ವಿದಾಯದ ದಿನವನ್ನೂ ತಿಳಿಸಿದ್ದಾರೆ, ಇಲ್ಲಿ ಸಾಹಿತ್ಯದ ಮೇಲೆ‌ ಪ್ರೀತಿಯು ನಾವು ಹೇಗೆ ಸಾಹಿತ್ಯವನ್ನು ಮುಂದುವರೆಸುತ್ತೇವೆ ಹೇಗೆ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ಇದೆ ಎಂದು ಭಾವಿಸುತ್ತೇನೆ...

-


2 NOV 2022 AT 20:17

* ಅನುಭಾವ *
ಯಾರಿಗಾಗಿ ದುಡಿಮೆ ಮಾಡ್ತಿವೋ
ಅವರು ಒಮ್ಮೆ, ನನಗಾಗಿ ಏನ ಮಾಡಿದಿಯೋ?
ಅಂದಾಗಲ್ಲವಾ ಹುಟ್ಟು ಸಿಗದ ದಡವೂ ಸಿಗದ
ಅಂಬಿಗನಾದ ಅನುಭವ..!

ಯಾರು ನನ್ನವರು ಎಂದಿರ್ತಿವೋ
ಅವರು ಒಮ್ಮೆ, ಬೆನ್ನ ಹಿಂದೆ ನಟಿಸಿದಾಗಲ್ಲವೋ
ಉಟ್ಟ ಬಟ್ಟೆ ಹೊದ್ದ ಹೊದಿಕೆ ಹಾರಿಹೋಗಿ
ಬೆತ್ತಲಾದ ಅನುಭವ..!

ಒಬ್ಬಂಟಿ ಒಳಗೊಳಗೆ ಬಹುಪಾತ್ರದಾರಿ
ಎಲ್ಲಾ ಪಾತ್ರಗಳು ತನ್ನೊಳಗೆ ಎಂದು ಎಷ್ಟು ಮುಖ
ತೊಟ್ಟು ಕುಣಿದರು ಮಳೆಯ ಮಧ್ಯೆ ಹುಲಿಯವೇಷ
ನಾಚಿಕೆಯಾದ ಅನುಭವ..!

ಎಷ್ಟುದಿನ ನಮ್ಮ ಬದುಕಿಗೆ ರಹದಾರಿ
ನಿಂತ ನೀರು ಕೊಳಚೆಯಂತೆ ಹಾವಿಯಾದರೆ
ಶುದ್ಧ ವಾಗುವುದು ಸತ್ತಮೇಲೆಯೇ
ಸಾರ್ಥಕತೆಯ ಅನುಭವ..!

-


26 OCT 2022 AT 10:35

ಬೆಳಗು ಬೆಳಗ ಬೆಳಗೋ ಬೆಳಗ
ಬಾಂದಳದಲಿ ಬರುವರು ಬಳಗ
ಚಿರಾಯು ಎಂದೆಂದು ಬಲಿಯ ಜಗ
ಬೆಳಗು ಬೆಳಗ ಬೆಳಗೋ ಬೆಳಗ

ಮಕ್ಕಳ ತಂತಿ ಮತಾಪು
ತಾತಾನ ಪೆಂಜಿನ ತಂಪು
ಪೂರ್ವಜ ಬಲೀಂದ್ರನ ನೆನಪು
ಬೆಳಗು ಬೆಳಗ ಬೆಳಗೋ ಬೆಳಗ

ದಾನವೇ ದೊಡ್ಡದು ಎಂದವನೇ ದಾನವ
ಸಹನೆಯೇ ಹಿರಿದು ಎಂದೆನುತ ಉಳಿದ
ತನ್ನ ಮಂಡಲ ಜನ ಸಂಕುಲಗಳ ಕಾಣಲು ಬರುವ
ಬಲಿಯ ನೆನಪಿಗಾಗೆ ಕಾದಿರುವ ದೀವಿಗೆ,

ದಾನವೇ ದೊಡ್ಡದು ಎಂದ ದಾನವನಿಗೆ ನಮನದ
ದೀಪಾವಳಿಯ ಶುಭಾಶಯಗಳು..🕯💐

-


24 SEP 2022 AT 9:01

ಕಲ್ಲು ಕರಗಿ ನೀರಾಗ ಬಹುದು
ನೀರಿನಲ್ಲಿ ಕಲ್ಲು ಬೆಳೆಯ ಬಹುದು

ಈ ಮಸಣಕ್ಕೆ ನೂರು ದಾರಿ ಇದ್ದರೇನು
ಯಾವ ದಾರಿಯು ವಾಪಸ್ಸಾಗುವುದಲ್ಲ
ಲಾಲಸೆಗಳಿಗೆ ಬಲಿಯಾದ ಮನಸ್ಸುಗಳು
ಎಂದೂ ಪರರಿಗಾಗಿ ಮಿಡಿಯುವುದಿಲ್ಲ

ಆ ಭಾನು ದಿನವು ಬದುಕ ಬಹುದು
ಸಂಜೆಗೆ ದಿನವೂ ಸಾಯಬಹುದು

ಪಶು ಪಕ್ಷಿ ನರ ಯಾರಾದರೇನು
ಜೀವ ನೀಡಿದಂಗೆ ಮರುಜೀವ ನೀಡಲಾಗುವುದೇ?
ಪ್ರಾಣವಿರುವುದೇ ತಪ್ಪಾಯಿತೇನು?
ಹೊಡೆದ ಹೃದಯ ಶುಧ್ಧ ದರ್ಪಣವಾಗುವುದೇ.?

-


12 AUG 2022 AT 20:53

ದಿನವೂ ಭಾರ ವಿಧಿಯೂ ಕ್ರೂರ||

ನಡೆಯಲೆಂದರೂ ನಡೆಯಲಾರೆ
ಕೂರಲೆಂದರೆ ಸಿಡಿಲ ಧಾರೆ
ನಗುವೆನೆಂದರೆ ಭಗ್ನ ಕೋರೆ
ಏನ ಮಾಡಲಿ ಎತ್ತ ಅಡಗಲಿ
ದಿನವೂ ಭಾರ ವಿಧಿಯೂ ಕ್ರೂರ.

ಸಂಬಂಧ ನೆಪಕೆ ಕೊರಳ ಕುಣಿಕೆ
ಪ್ರತೀ ಆರಂಭ ಕಡೆಗೆ ಅಶುಭ
ನಿಧಿಯ ರೂಪ ಕೆಂಡ ತಾಪ
ವಸ್ತ್ರ ಝರಿಯು ಜ್ವಾಲ ಕಿಡಿಯು
ದಿನವೂ ಭಾರ ವಿಧಿಯೂ ಕ್ರೂರ...

ತೊರೆಯಲಾರೆ ವಜ್ರದೊಡವೆ
ತಡೆಯಲಾರೆ ಆತ್ಮ ಕೃತಿಯ
ಇಳಿಸಲಾರೆ ಹೊತ್ತ ಹೊರೆಯ
ಬಾಳಿರೆ ಸಹಿಸಲಾರದ ಸಮಯ
ದಿನವೂ ಭಾರ ವಿಧಿಯು ಕ್ರೂರ...

-


11 AUG 2022 AT 19:40

ಹೃದಯದಲ್ಲಿ ಯಾರನ್ನು ಇಟ್ಕೊಬಾರ್ದು, ಸಮಯ ಸಂದರ್ಭ ಬಂದಾಗ ಎದೆಯನ್ನೆ ಬಗೆದು ಆಚೆ ಬಂದು ಬಿಡ್ತಾರೆ...

ಸದಾ ಯಾರದೊ ಒಬ್ಬರ ಗುಂಗಿನಲ್ಲಿರೊದೇ ಜೀವನ ಅಂತ ಇರಬಾರ್ದು, ಒಂದೊಮ್ಮೆ ನೆನಪಲ್ಲೂ ಅರೆಕ್ಷಣ ಸಮಯ ಕೊಡಲಾರರು...

ಪ್ರಚಂಚದ ಅತಿ ದೊಡ್ಡ ಸತ್ಯ ಅಂದ್ರೆ ನಮ್ಮವರು ಅಂತ ಯಾರು ಇರೋಕೆ ಸಾದ್ಯವಿಲ್ಲ, ನಾನು ಅನ್ನೊವ್ನ ಬಿಟ್ರೆ ಉಳಿದವರೆಲ್ಲ ಪರರು...

ಯಾವುದೇ ರಕ್ತ ಅಥವಾ ಲೋಹ ಶಾಶ್ವತವಾದ ಸಂಬಂಧವನ್ನ ಸೃಷ್ಟಿಸಿ ಕೊಡೋದಿಲ್ಲ...

-


15 JUL 2022 AT 17:44

ಹೊಸದೊಂದು ಪ್ರಪಂಚದ ಬಾಗಿಲು ಇಂದು ತೆರೆದುಕೊಂತು...
ಮನದಲಿ ದುಗುಡವು ಕಣ್ಣಲಿ ಹನಿಯು ಕೆನ್ನೆಯಲಿ ನಗುವು ತುಂಬಿಕೊಂತು...
ಭಯದಲಿ ಅಭಯ ತೋರಲು ನಾನು ನಾನಲ್ಲದವನಾದೆ,
ಗರ್ವ ಗೌರವ ಎಲ್ಲವನು ಕೊಟ್ಟು ಮೌನದೇ ಮಲಗಿದ್ದಳವಳು ಮಗನಿಗಾಗಿ ಕಾದು...
ಪ್ರಶಾಂತ ಅಮ್ಮನನು ಅಪ್ರಬುದ್ಧ ಅಪ್ಪನನು ನನಗಾಗೆ ಕೆಲಕಾಲ ಪ್ರತೀಕ್ಷಿಸಿ ಎಂದ ಪ್ರಫುಲ್ಲನು...💙💙

-


2 JUL 2022 AT 13:54

ಪ್ರೀತಿಯ ಕಡಲಾದರೂ ಪ್ರೀತಿಯನೇ ತೋರಲು ಬಾರದವನು,
ಎಲ್ಲವನೂ ಕೊಟ್ಟರೂ ಏನೂ ಇಲ್ಲದಂತೆ ಇರುವ ಬಡವನಿವನು,

ಕಾಳಜಿ ಇದ್ದರೂ ಮಾತು ಮಾತಿಗೂ ಕಠೋರವಾಗಿ ಕಾಣುವವನು,
ನಿರೀಕ್ಷೆಗಳಿಲ್ಲದಿದ್ದರೂ ಸಾವಿರ‌ ಸಾವಿರ ಕನಸುಗಳ ಹುಟ್ಟಿಸುವವನು,
ಎದುರಿಗಿರಲಿ ದೂರವೇ ಇರಲಿ ನಮ್ಮ ನಡೆಯ ಧೈರ್ಯವವನು,

ಹೆಗಲು ಕೊಟ್ಟು ನೊಗವನೊತ್ತು ಉಸ್ಸೋ ಎಂದರು ಮುಗುಳು ನಗುವವನು
ನಿದ್ದೆಗೆಟ್ಟು ಉಂಡಿದ್ದು ಒಪ್ಪತ್ತಿನ್ಹಿಟ್ಟು ಆಯಾಸವಾಯ್ತು ಅನ್ನೊದ ಮರೆತವನು
ಹರಿದ ಅಂಗಿಗೆ ಆಗದ ಗುಂಡಿಯ ಜೋಡಿಸಿ ಮೇಲಾಟ ಅರಿಯದವನು...

-


2 JUL 2022 AT 12:47

ನೀ ಸಿಕ್ಕರಷ್ಟೇ
ಬದುಕಲು ಸಾಧ್ಯ, ನೀ
ಜೀವದ ದೋಣಿ.

-


Fetching shivu shiku Quotes