Sham Samrat   (ಕವನವನ)
8 Followers · 12 Following

ವೃತ್ತಿಯಲ್ಲಿ ವಕೀಲ⚖️, ಪ್ರವೃತ್ತಿಯಲಿ
ಮನದೊಳಗೆ ಚಿಗುರೊಡೆದ ಪದಗಳನು ಜೋಡಿಸುವ ಕೆಲಸಗಾರ.
Joined 1 February 2021


ವೃತ್ತಿಯಲ್ಲಿ ವಕೀಲ⚖️, ಪ್ರವೃತ್ತಿಯಲಿ
ಮನದೊಳಗೆ ಚಿಗುರೊಡೆದ ಪದಗಳನು ಜೋಡಿಸುವ ಕೆಲಸಗಾರ.
Joined 1 February 2021
23 APR AT 13:51

ನಾವು ಪುಸ್ತಕ ಓದಿ
ಅಂಕಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ;
ಆದರೆ
ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದೇವೆ.
~ಎ. ಎಸ್ ಕೆ

-


19 APR AT 21:58

ಅವಳ ದೇಹದ
ಅಂತ್ಯಸಂಸ್ಕಾರವಾಗುವುದರೊಳಗೆ
ಅವಳ ಸಾವಿಗೆ ನ್ಯಾಯ ಕೊಡಿಸುವೆವೋ
ಇಲ್ಲವೋ ನಾ ಕಾಣೆ...!!!!
"ಆದರೆ"
ಅವಳ ಕೊಂದವನ
ಅಂತರಾತ್ಮ ಕ್ಷಣಕ್ಷಣಕೂ ಪ್ರಾಯಶ್ಚಿತಮಾಡಿಕೊಳ್ಳುವಷ್ಟು,
ಅವನ ದೇಹಾತ್ಮಗಳು ನಿರ್ಜೀವ, ನಿಷ್ಪ್ರಯೋಜನವೆಂದೆನಿಸುವಷ್ಟು,
ಅಮರಣಣಾಂತ ಶಿಕ್ಷೆಯು ಅವನಿಗೆ ದಕ್ಕಿಸುವೆವು.......!!!!!
~ ಎ. ಎಸ್ಕೆ.

-


3 FEB AT 21:57

ಬಡ ಮತ್ತು ಮಧ್ಯಮ
ವರ್ಗದ ಯುವಕರು ಧರ್ಮದ ಆರಾಧನೆ ತೊರೆದು ಓದುವ ಹಾದಿ ಹಿಡಿದರೆ, ಹಿರಿಯರು ದುಡಿಯುವ ದಾರಿಯಲಿ ನಡೆದರೆ, ಮುಂದಿನ ಭವಿಷ್ಯ ಯಾವ ಜ್ಯೋತಿಷ್ಯನನ್ನು ಕೇಳದಿದ್ದರು ಪ್ರಜ್ವಲಿಸುತ್ತದೆ.
~ಎ.ಎಸ್ಕೆ

-


2 FEB AT 22:44

ಕಳೆದು ಹೋದದ್ದು ಕಳೆದುಕೊಂಡವರಿಗೆ ಮಾತ್ರ ಅತ್ಯಮೂಲ್ಯ;
ಅದರಗತ್ಯವಿಲ್ಲದವರಿಗೆ ಸಿಕ್ಕರೆ
ಏನು ಮೌಲ್ಯ.......‽‽‽‽
~ಎ. ಎಸ್ಕೆ

-


26 JAN AT 9:19

75 ವರ್ಷಗಳ ಹಿಂದೆ ನಮ್ಮ‌ದೇಶದಲ್ಲಿ ರಾಜಪ್ರಭುತ್ವ ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಜಾರಿಗೊಳಿಸಿ;
ಪ್ರತಿಯೊಬ್ಬ ಪ್ರಜೆಗೂ ಹಕ್ಕು ಗೌರವಗಳು ಸಂದು
"ಸ್ವತಂತ್ರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದಕ್ಕಿದ ಅರ್ಥಪೂರ್ಣ ಸ್ವಾತಂತ್ರೋತ್ಸವ ದಿನವಿದು"
~ಎ.ಎಸ್ಕೆ

-


28 DEC 2023 AT 17:32

ಕೆಟ್ಟವರ ಕಣ್ಣಿಗೆ ಒಳ್ಳೆಯವರು ಎಂದೂ ಕೆಟ್ಟವರೆ.....!!!

-


8 DEC 2023 AT 12:26

ನಾವು ವಕೀಲರು

ವಕೀಲರು ನಾವು ವಕೀಲರು
ನ್ಯಾಯ ಕಾಪಾಡಲು ನಿಂತ ಸೈನಿಕರು
ಎಲ್ಲರು ಕಷ್ಟಕೆ ದೇವರ ಕೈಮುಗಿವರು
ನ್ಯಾಯದ ಪ್ರಶ್ನೆಗೆ ವಕೀಲರೆ ಅವರಿಗೆ ದೇವರು

ಸ್ನೇಹಿತರ ಬಳಗವೂ ಬದಿಗೊತ್ತು
ಕಕ್ಷೀದಾರರ ಪರವಾಗಿ ನಿಂತು
ವಕಾಲತ್ತು ವಹಿಸುವೆವು
ನ್ಯಾಯಕ್ಕಾ ಗಿ ಜೀವವೂ ಪಣಕಿಟ್ಟು

ಅಲ್ಲಲ್ಲಿ ನಮಗೆ ಹಲ್ಲೆಗಳಾದರೂ
ಬೆದರಿಕೆಗಳಾದರೂ, ಕೊಲೆಗಳಾದರೂ,
ಕಾಯಕವೆ ಕೈಲಾಸವೆಂದು
ನ್ಯಾಯಕಾಗಿ ಮತ್ತೆ ಎದ್ದು ನಿಲ್ಲುವೆವು

ಸಂವಿಧಾನದ ಆಶಯಗಳ ರಕ್ಷಣೆಗೆ
ಸದಾ ಮುನ್ನುಗ್ಗುವೆವು
ನ್ಯಾಯ, ಅನ್ಯಾಯ ಯುದ್ದದಲಿ ನ್ಯಾಯವ ಗೆಲ್ಲಿಸುವೆವು
ಅವರವರ ಹಕ್ಕುಗಳನು ಅವರಿಗೆ ದಕ್ಕಿಸುವೆವು
ಅವರವರ ಹಕ್ಕುಗಳನು ಅವರಿಗೆ ದಕ್ಕಿಸುವೆವು

-


7 DEC 2023 AT 19:11

ಕನಸನ್ನು ಬರಿ ಖಿಸೆಯಲ್ಲಿರಿಸಿಕೊಂಡರೆ ಏನಾದೀತು........‽‽‽

-


5 JUL 2023 AT 19:01

'ಟೀನೇಜಲಿ'
--------------------
ಕಣ್ಣಲ್ಲಿ ಆಗೋ ಕನೆಕ್ಷನ್ನಿಗೆ
ಸಾವಿರಾರು ಫೀಲಿಂಗಳು
ಇವಕೆಲ್ಲ ಹೊಲಿಗೆ ಹಾಕಿ ಪೋಣಿಸೊ
ಹಾರ್ಟೆಂಬ ಡಾಕ್ಟರು.....

-


26 JUN 2023 AT 18:54

ಆಗಸವೆ ನೀನಾಗಿರುವಾಗ
ನಿನ್ನ ನೋಡದಿರಲು ಇನ್ನು ನನಗೆ ಮುನಿಸೆಲ್ಲಿ

-


Fetching Sham Samrat Quotes