Santhu K R S   (ಕೆ ಆರ್ ಎಸ್...)
72 Followers · 80 Following

Joined 29 December 2018


Joined 29 December 2018
16 MAY AT 19:52

ನೋಡಿದ್ದೆಲ್ಲಾ ನಿಜವಲ್ಲ
ಕೇಳಿದ್ದೆಲ್ಲಾ ಸುಳ್ಳಲ್ಲ
ಕಂಡದ್ದು ಸುಳ್ಳಾಗಿರಬಹುದು
ಕೇಳಿದ್ದು ನಿಜವಾಗಿರಬಹುದು
ತಿಳಿಯೋ ಮಂದಿ ಮುಖ್ಯ
ಅರಿಯೋ ಬುದ್ಧಿ ಕೂಡ...

-


12 MAY AT 9:36

ಅಮ್ಮ...

ಹೊತ್ತು ನಡೆಯಿತು ಆ ಗರ್ಭ
ತಿಳಿದೆ ಜನ್ಮ ನೀಡುವುದೇ ಗರ್ವ
ಅರಿಯಲಾರೆ ನಿನ್ನ ಶಕ್ತಿಯ ಮರ್ಮ
ನಿನ ಹಾರೈಕೆಯೇ ಸುಂದರ ಪರ್ವ

ನಿತ್ರಾಣದ ಕಣ್ಣ ರೆಪ್ಪೆಯ ಬಿಚ್ಚಿ
ಆನಂದದ ಕಣ್ಣೀರ ಸುರಿಸಿ
ಬಿಗಿದಪ್ಪಿದೇ ನನ್ನ ಈ ಧರೆಗೆ ತಂದು
ಧಾರೆಯೆರೆದು ನಿನ್ನ ಶ್ವಾಸವ ವಿಶ್ವಾಸವ...

ಎದೆಯ ಬಿಸಿಯಲಿ ಬಚ್ಚಿಟ್ಟು
ಉಣಿಸಿದೆ ಜೀವಾಮೃತವ
ಮಡಿಲ ಅರಮನೆಯಲಿಟ್ಟು
ಬಡಿಸಿದೆ ತುತ್ತು ಅನ್ನವ...

-


9 MAY AT 20:30

" ಕಲ್ಲು "

ಕರಿಗಿದರೆ ಮಣ್ಣು
ಕೊರಗಿದರೆ ಕಣಿವೆ
ತಲೆ ಎತ್ತಿ ನಿಲ್ಲಲು ಗಿರಿ ಪರ್ವತ
ಸೊರಗಿ ಕೂತರೆ ಬೆಟ್ಟ ಗುಡ್ಡ
ಹುಳಿ ಪೆಟ್ಟು ಬೀಳಲು ದೇವರು
ಕುಳಿ ಬಿದ್ದರೆ ನಿಲ್ಲುವುದು ನೀರು
ದೃಷ್ಟಿ ನೆಟ್ಟರೆ ಅರಳುವುದು ಶಿಲ್ಪ ಕಲೆ
ಕಿವಿ ಕೊಟ್ಟರೆ ಹೊಮ್ಮುವುದು ನಾದ ಲೀಲೆ...

-


7 MAY AT 22:27

ಕಡಲ ಬಯಸಿ ಹರಿವ ನದಿ
ನುಂಗಿ ಓಡುತಿದೆ ಸಿಕ್ಕಿದೆಲ್ಲಾ ಸವರಿ
ಹೋದಲೆಲ್ಲಾ ನಾಗರೀಕತೆಯ ಬುನಾದಿ
ನದಿಯೊಂದು ಹೆರಿಗೆಯಾಗದ ಬಸುರಿ
ಬಳುಕಿ ತುಳುಕಿ ನಡೆದದ್ದೇ ಹಾದಿ
ಕಡಲೊಂದೇ ಮುಂದಿರೋ ಗುರಿ...

-


5 MAY AT 22:50

ವಾಟ್ಸಾಪ್ ಸ್ಟೇಟಸ್ ಗ್ರೂಪ್ ಅಲ್ಲಿ ಪಕ್ಷಿಗಳಿಗೆ ಊಟ ನೀರು ನೀಡಿ ಅಂತ ಫೋಟೋ
ಕಾರಣ ತಣಿಸೋಕೆ ಅವುಗಳ ಹಸಿವು ದಾಹ
ಇವರಲ್ಲಿ ಅರ್ಧ ಜನರೂ ಸಹ ಇಟ್ಟಿಲ್ಲ ಕನಿಷ್ಠ ಖಾಲಿ ತಟ್ಟೆ ಲೋಟ
ಇದೆಲ್ಲಾ ಕೇವಲ ಜನಾಕರ್ಷಣೆಯ ಮೋಹ...

-


30 APR AT 22:00

ಏ ಸ್ಕಂದ ಏ ಸ್ಕಂದ
ಹೀರಿದೆಯ ನನ ಪ್ರೀತಿಯ ಮಕರಂದ
ನಿನ್ನಿಂದ ನನ್ನೀ ಆನಂದ
ಇದುವೇ ನಮ್ಮ ಅನುಬಂಧ...

ಬಾನಲ್ಲಿ ಮೂಡೋ ನೇಸರ ನೀನು
ನೀರಲ್ಲಿ ಅರಳೊ ಕಮಲವು ನಾನು
ನನ್ನಲ್ಲಿರೋ ಒರಟ ನೀನು
ನಿನ್ನಲ್ಲಿರೋ ಒನಪು ನಾನು...

-


22 APR AT 22:14

" ಎಲೆಕ್ಷನ್ - ಸೆನ್ಸೇಷನ್ - ಕರೆಕ್ಷನ್ "

ಬಂತು ಬಂತು ಎಲೆಕ್ಷನ್
ಕೆಲವರಿಗಂತೂ ಕೈ ತುಂಬಾ ಕಲೆಕ್ಷನ್
ಹೇಳುವರು ಅಭಿವೃದ್ಧಿಯೇ ನಮ್ಮ ಟ್ಯಾಗ್ ಲೈನ್
ಓಡಿಸುವರು ಹಳಿಯೇ ಇಲ್ಲದೇ ಸುಳ್ಳಿನ ಟ್ರೈನ್

-


19 APR AT 21:32

ನಿಜವಾದ ಪ್ರೀತಿ ಸ್ನೇಹ ಯಾರನ್ನೂ ಸಾಯಿಸುವುದಿಲ್ಲ ...ಕಾಪಾಡುತ್ತೆ...ಬದುಕ ನೀಡುತ್ತೆ ಅನ್ನೋ ನಂಬಿಕೆ ಹಿಂದಿನಿಂದಲೂ ಇದೆ... ಸತ್ಯ ಕೂಡ...

-


15 APR AT 10:26

ಕಣ್ಣ ಮುಚ್ಚಿ ಮಲಗಿದ ಈ ದೇಹ
ಒಳಗಣ್ಣು ಬಿಚ್ಚಿ ನಲುಗಿದೆ ಮನ
ಅರಿಯೆನು ಈ ನೋವಿನ ಕಾರಣ
ಉಕ್ಕಿದೆ ಕಣ್ಣಹನಿಯು ಹೇಳಿ ಸಾಂತ್ವಾನ...

-


11 APR AT 22:23

ಚುಟುಕು...

ಮತ್ತೆ ಬಂದಿದೆ ಚುನಾವಣೆ ಮಾಡಿ ಮತ ಚಲಾವಣೆ
ಇಲ್ಲಿ ತನಕ ಯಾರೂ ಬಂದು ಕೇಳಿಲ್ಲ ಜನರ ಬವಣೆ
ಈಗ ಕೇಳುತ್ತಿರುವರು ತಪ್ಪದೇ ನಮಗೆ ಮಾಡಿ ಮತದಾನ
ಸರಿಯಾಗಿ ನೋಡ್ಕೊಂಡ್ ಬಿಡಿ ಮುಂದಿನ ಚುನಾವಣೆಯಲ್ಲೇ ಅವರ ದರ್ಶನ

-


Fetching Santhu K R S Quotes