Sahithya Priya   (ಸಾಹಿತ್ಯಪ್ರಿಯ)
282 Followers · 194 Following

ಕನ್ನಡ ನಾಡು
Joined 19 April 2018


ಕನ್ನಡ ನಾಡು
Joined 19 April 2018
12 APR AT 20:37

ಇಳೆ ತಂಪಾದಳು

ಬಿಸಿ ಶಾಖದಪ್ಪುಗೆಯ
ತುಸು ಭಾರವ ಇಳಿಸಿ
ಮುಂಗಾರಿನ ಹನಿಗಳ
ಮೊದಲ ಚುಂಬನಕೆ.

-


19 MAR AT 13:11

ಏನೆಂದು ಬರೆಯಲಿ ನಾ

ಇಳಿ ಸಂಜೆಯ ನೇಸರನು ಸೋತಿಹನು
ಬಾಡದಿರುವ ನಿನ್ನ ಚೆಲುವಿಗೆ
ಇನ್ನೂ ನಾ ಸೋಲದೆ ಇರಲಾರೆನೆ?

ತೆಳು ಮೋಡದ ನೀಲಾಕಾಶವೂ ನಾಚಿ ನೀರಾಗಿ ನಿಂತಿರಲು
ಇರುಳು ಕಾಯುತಿದೆ ಕಾತುರದಿ
ನಿನ್ನ ಬಾಡದ ಚೆಲುವಿಗೆ ಚಂದ್ರನ ತಂಪಿನ ಸುಗಂಧ ಸೂಸಲು...

-


23 FEB AT 22:22

ದ್ವೇಷ ಬರಿದಾದ ಮೇಲೆ ಪ್ರೀತಿ ಹುಟ್ಟುತ್ತದೆ...

-


18 FEB AT 17:21

ಮೂಕ ಹಕ್ಕಿ ಮಾತು ಕಲಿತಾಗ
ಹಾಡಿದ ಮೊದಲ ಹಾಡಲ್ಲಿ ನಿನ್ನ ಹೆಸರಿತ್ತು ಹುಡುಗ

~ ಸೌಗಂಧಿಕ

-


12 NOV 2023 AT 19:54

ಹಸಿವಿನ
ಹಣತೆಯೊಂದನ್ನಿಟ್ಟಿದ್ದೇನೆ
ಅನ್ನ ನೀಡಿ ಹಸಿವದರ ನೋವಿಗೆ ಬೆಳಕ ನೀಡುವವರು ಬೇಕಾಗಿದ್ದಾರೆ

ಜ್ಞಾನದ ಹಣತೆಯೊಂದನ್ನಿಟ್ಟಿದ್ದೇನೆ
ಅಕ್ಷರಗಳ ಎಣ್ಣೆ ಬತ್ತಿಯ ಹಾಕಿ
ಅರಿವಿನ ಬೆಳಕ ಹೊತ್ತಿಸುವವರು ಬೇಕಾಗಿದ್ದಾರೆ

ಶಾಂತಿಯ
ಹಣತೆಯೊಂದನ್ನಿಟ್ಟಿದ್ದೇನೆ
ಬೆಳಗಿಸಲು ರಕ್ತದಾಹವಿಲ್ಲದ ಮನುಷ್ಯರು ಬೇಕಾಗಿದ್ದಾರೆ

ಸಮತೆಯ ಹಣತೆಯೊಂದನ್ನಿಟ್ಟಿದ್ದೇನೆ
ಎದೆಯೊಳಗಿನ ದ್ವೇಷ ತೊರೆದು ದೀಪ ಹಚ್ಚುವವರು ಬೇಕಾಗಿದ್ದಾರೆ


ಹೊಸ ಬೆಳಕು ಬೇಕಾಗಿದೆ ಬದುಕಿಗೀಗ

ಭಾವ ಭಾಷೆ ಬಣ್ಣ - ಮತ ಧರ್ಮ ಕುಲ
ದೇಶ ಗಡಿಗಳ ಮದ್ದು ಗುಂಡುಗಳ ದಾಟಿ

ವಿಶ್ವಮಾನವತೆಯ ಹಣತೆ ಹಚ್ಚುವವರು ಬೇಕಾಗಿದ್ದಾರೆ

-


24 OCT 2023 AT 14:05

ಕರುನಾಡಿನ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯಗಳು

-


3 AUG 2023 AT 19:29

ನಾನು ಹಿಂದೂ ಆಗಿರುವಾಗ ಈ ಸಭೆಯ ಅಧ್ಯಕ್ಷತೆ ವಹಿಸುತ್ತಿರುವ ಮೀರ್ ಮುಷ್ತಾಕ್ ಒಬ್ಬ ಮುಸ್ಲಿಂ ನಿಮ್ಮನ್ನು ಉದ್ದೇಶಿಸಿರುವ ಫ್ರಾಂಕ್ ಆಂಟನಿ ಒಬ್ಬ ಕ್ರಿಶ್ಚಿಯನ್

ಮುಸ್ಲಿಮರು,ಕ್ರಿಶ್ಚಿಯನ್ನರು,ಸಿಖ್ಖರು,ಪಾರ್ಸಿಗಳು ಮತ್ತು ಎಲ್ಲಾ ಇತರ ಧರ್ಮದ ಜನರು ಈ ದೇಶದಲ್ಲಿದ್ದಾರೆ ನಮ್ಮಲ್ಲಿ ದೇವಸ್ಥಾನಗಳು ಮತ್ತು ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚುಗಳು ಇವೆ ಆದರೆ ನಾವು ಇವೆಲ್ಲವನ್ನೂ ರಾಜಕೀಯಕ್ಕೆ ಬಳಸುವುದಿಲ್ಲ.

~ ಲಾಲ್ ಬಹದ್ದೂರ್ ಶಾಸ್ತ್ರಿ
(ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಮಾಡಿದ ಭಾಷಣದಲ್ಲಿ)

-


29 JUL 2023 AT 14:04

“ಮನುಷ್ಯ ಚಂದ್ರಮಂಡಲಕ್ಕೆ ಹೋಗಿ ಬಂದರೂ ಕ್ಷುದ್ರಬುದ್ಧಿ, ಅಂಧಶ್ರದ್ಧೆ ಮೀರಲು ಸಾಧ್ಯವಾಗಿಲ್ಲ.”
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

-


21 JUL 2023 AT 21:36

ಸಾಧಾರಣ ಜನ
ಧರ್ಮವನ್ನು ಸತ್ಯ ಅಂತ ಒಪ್ಪುತ್ತಾರೆ ಬುದ್ದಿವಂತರು
ಸುಳ್ಳು ಅಂತ ತಿರಸ್ಕಾರ ಮಾಡುತ್ತಾರೆ

ರಾಜಕಾರಣಿಗಳು ಆಯುಧ ರೀತಿ ಉಪಯೋಗಿಸುತ್ತಾರೆ
ಮೂರ್ಖರು ಅವರ ಈ ಆಯುಧಕ್ಕೆ ಬಲಿಯಾಗುತ್ತಾರೆ

ಇದರಲ್ಲಿ ನೀವೇನಂತ ಗುರುತಿಸಿಕೊಳ್ಳಿ ಮತ್ತು ಬದಲಾಗುವದಿದ್ದರೆ ಬದಲಾಗಿ...

-


13 JUL 2023 AT 9:07

ಅರಿವೆ ಗುರು ನುಡಿ ಜ್ಯೋರ್ತಿಲಿಂಗ
ದಯವೆ ಧರ್ಮದ ಮೂಲ ತರಂಗ

-


Fetching Sahithya Priya Quotes