ಪ್ರಿಯಾಂಕಾ ಬಿಳ್ಳೂರ   (✍🏻ಸವಿಪ್ರಿಯೇ (ಪ್ರಿಯಾಂಕಾ))
1.5k Followers · 63 Following

read more
Joined 27 March 2020


read more
Joined 27 March 2020

ಸದಾಕಾಲ ನಗುವ ನಗುವಿಗೆ
ಅದ್ಯಾಕೋ ಈ ದಿನ ವಿಪರೀತ ಅಳು
ಅಳುವ ನಗುವಿನ ಆರ್ತನಾದ
ನಗುವ ನಗುವಿನ ಕಣ್ಮರೆಯ ತನನ....

-



ಹೇಳಲಾಗದ ನೂರು ನೋವುಗಳ
ಒಡಲ ವೇದನೆಯನ್ನು ಮೌನವೆಂದೇ ಪ್ರತಿನಿಧಿಸಿದೆ.
ಮನಬಿಚ್ಚಿ ಮಾತಾಡುವ ಹೃದಯವಿಂದು
ಶಾಶ್ವತ ಮೌನಕ್ಕೆ ಸ್ಥಾನಕೊಟ್ಟಿದೆ.
ಕಂಡ ಕನಸೆಲ್ಲಾ, ಬೇಸದ ಬಂಧ- ಭಾಂಧವ್ಯಗಳೆಲ್ಲ
ಶೂನ್ಯತೆಯ ಪ್ರತಿಬಿಂಬವಾಗಿ ಗೋಚರಿಸಿವೆ
ಕೇಳಿ ಬಿಡಲೇ ಕಾರಣ ನಾನಿನ್ನೂ ಮನವಿಗೆ.?
ಪಾಪ.! ಅದಕ್ಕೂ ಅನುಮಾನ..,ಸತ್ಯತೆಯ ಸೂಚನ...!

-



ಯಾವಾಗ ನಿಮ್ಮವರಿಗೆ ನೀವಲ್ಲದ ಇನ್ನೊಬ್ಬರು ಅವರವರಾಗುತ್ತಾರೋ,
ಆವಾಗ ನಿಮ್ಮತನ ಬಿಟ್ಟು ನೀವು ಅವರ ಬಳಿ ಹೋದರೂ,
ನೀವು ಅವರವರಾಗಿ ಉಳಿದಿರುವುದಿಲ್ಲ......
ನಿಮ್ಮ ಸ್ಥಾನ ನಿಮಗೆ ತಿಳಿಯದೆಯೇ ಪಲ್ಲಟವಾಗಿರುತ್ತದೆ.....
ಎಚ್ಛರ...!!!

-



ಸಣ್ಣವೆನಲ್ಲಾ ಅವು
ಸಾವಿನ ದಾರಿಗೆ ಸಮೀಪವೆಂದಿಗೂ...!

-



ಬದುಕೆಂಬ ಈ ಪಯಣದಲ್ಲಿ
ಎಲ್ಲವೂ ಪ್ರಶ್ನಾರ್ಥಕ
ನನ್ನವರಾರಿಲ್ಲ ಎನ್ನುವ ನಿರರ್ಥಕ
ಸಂಬಂಧದ ಸುಳಿವಿಲ್ಲ
ಉಳಿಯುವ ಭರವಸೆಯುಳಿದಿಲ್ಲ.

-



ನೆನಪಿರದ ಪ್ರೀತಿಗೆ...!
ಮನದಿಯಿರದ ಒಲವಿಗೆ...!
ನೆನಪಿನ ನೆಪಮಾಡಿಯಾದರೂ., ನೆನಪಿಸಿಕೊಳ್ಳಬಾರದೇ...??

-



ಎಲ್ಲಾ ನೋವಿಗೂ
ನೀನಿರುವ ಮದ್ದಿನ
ಅಮಲಿದೆ ಗೆಳತಿ...!
ನೀನೇ ಇಲ್ಲದ
ವಿರಹದ ನೋವಿನ ಸಂಗತಿ
ಅರುಹಲಿ ನಾನ್ಯಾರಿಗೆ...?

-



Someone to the "Writer" : What is ur
Happiness...?
Writer : Seeing my quotes in others
Status and Story.

-



ನಿನ್ನ ನೆನಪೆಂಬ ದೋಣಿಯಲ್ಲಿ.,
ತಂಪೆರೆಯುವಂತಿದ್ದ ಆ ಮಾತುಗಳೆಲ್ಲ.,
ಬಿಸಿಲ ತಾಪಕ್ಕೆ ಸಿಕ್ಕಿ ಬೆವರಿಳಿಸಿದಂತಿವೆ...!

ಮಳೆ ಹನಿಗಳಂತಿದ್ದ ಮನಸ್ಸಿನ ಭಾವನೆಗಳು.,
ಗುಡುಗು-ಸಿಡಿಲ ಹೊಡೆತಕ್ಕೆ ಸಿಕ್ಕಿ.,
ಒಡೆದ ಕನ್ನಡಿಯ ಚೂಪಾದ ಚುರಾಗಿವೆ...!

ನವಿರಾಗಿ ಚಿಗುರೊಡೆಯುವಂತಿದ್ದ ಕನಸುಗಳೆಲ್ಲ.,
ಮರೀಚಿಕೆಯ ಕಲ್ಪನೆಯ ಸೆಳೆತಕ್ಕೆ ಸಿಕ್ಕಿ.,
ನೆಲೆ ಕಾಣದೆ ಒಲವಿನ ಬಯಕೆಯ ಕೊಲೆಗೈದಿವೆ...!

-



ಕಾನೂನ ಕಟ್ಟಳೆಯಲ್ಲಿ ಕವಿದ ಕನಸುಗಳೆಲ್ಲ
ಕತ್ತಲೇ...!
ಇರುವಾಗ ಸಿಗದ ನ್ಯಾಯ ಕೈ ಬಿಸಿ
ಕರಿದಂತೆ ಹೋದಮೇಲೆ...!
ಅವಸರದ ನ್ಯಾಯ ಅನ್ಯಾಯಕ್ಕೆ
ಅಡಿಯಾಗದಿರಲೆಂದು..,
ಆತ್ಮ ವಂಚಿಸಿ ಕಾದರೂ ಆತ್ಮ ಹಾರಿದ
ಮೇಲೆಯೇ ಆಗಮನ ಅದರದ್ದೂ...!
ಕಾಸಿನ ಕೈಯಡಿಯಲ್ಲಿ ಕೇಕೆಹಾಕಿದ
ಒಡಲ ನೋವುಗಳು..,
ಮಿತಿಮೀರಿ ನಡೆಯುತ್ತಿವೆ ಕಣ್ಣೆದುರೇ
ಕೊಲೆಗಳು ಅನ್ಯಾಯಡದಿಯಲ್ಲಿ...!
ಕಂಡ ಗುರಿಯ ಆಶಾಗೋಪುರೆ
ನೀರ್ವಸ್ಥ್ರಗೊಂಡಂತೆ ಭಾವಜೀವಿಯದ್ದು...!
ಭರತ ಭೂಮಿಯ ಭಾವೈಕ್ಯತೆಯಲ್ಲಿ
ಕಾಮ ಕ್ರೋಧ ತೋಳದ ತೊಳಲಾಟ...!
ಪ್ರತ್ಯಕ್ಷ ದರ್ಶೀಯಾದರೂ ನಾ ಇಲ್ಲಿ
ಸ್ತಬ್ಧ ಬರ್ರಿ ಸ್ತಬ್ಧ ಮಾತ್ರ...!!!

-


Fetching ಪ್ರಿಯಾಂಕಾ ಬಿಳ್ಳೂರ Quotes