Pradeep Keshava   (ಪ್ರದೀಪ್ತನಾದ)
66 Followers · 9 Following

ಹವ್ಯಾಸಿ ಬರಹಗಾರ
Joined 10 July 2018


ಹವ್ಯಾಸಿ ಬರಹಗಾರ
Joined 10 July 2018
10 DEC 2021 AT 10:39

ಕೆಲವರು ನಮ್ಮ ಜೀವನದಲ್ಲಿ ಟಯರ್ಗೆ ಸಿಕ್ಕಿ ಹಾಕಿಕೊಂಡ ಕಲ್ಲಿನ/ಮುಳ್ಳಿನ ತುಂಡಿನಂತೆ, ಎಷ್ಟು ಬೇಗ ಪರಿಶೀಲಿಸಿ ತೆಗೆಯುತ್ತೇವೆಯೋ ಅಷ್ಟು ಬೇಗ ಟಯರ್(ಜೀವನವನ್ನು) ರಕ್ಷಿಸಿಕೊಳ್ಳಬಹುದು. ಇಲ್ಲವಾದಲ್ಲಿ ಅದು ಇನ್ನಷ್ಟು ಆಳಕ್ಕೆ ಹೊಕ್ಕು ಟಯರನ್ನು ಹಾಳು ಗೆಡವುತ್ತದೆ.

-


30 APR 2021 AT 16:52

ಬಿರುಬಿಸಿಲಿನ ಝಳಕೆ ಕಾದು ಬಸವಳಿದ ಭೂಮಿಗೆ, ತಂಪೆರದು ತಣ್ಣನೆಯ ತಂಗಾಳಿಯ ಸನಿಹಕೆ ತರುವ ವರ್ಷ ಧಾರೆಯಂತೆ, ನನ್ನ ಏಕಾಂತದ ಝಳಕೆ, ತಂಪೆರೆವ ವರ್ಷ ಧಾರೆ ಬರುವಳೆಂದೊ.. ಬಕದಂತೆ ಕಾದಿರುವ ಇಲ್ಲೊಬ್ಬ ರಸಿಕ.🥰

-


26 FEB 2021 AT 0:03

ಕನಸು ರಾತ್ರಿಯ ನಿದ್ದೆಗೆ ಸೀಮಿತವಾಗಬಾರದು, ಅದನ್ನು ಹಗಲಿನಲ್ಲಿ ನನಸಾಗಿಸುವ ಪ್ರಯತ್ನವೂ ನಡೆಯಬೇಕು. ನಿದ್ದೆಯಲ್ಲಲ್ಲ, ಎಚ್ಚರಗೊಂಡಾಗ.

-


2 FEB 2021 AT 23:40

ಸಮಾಜದಲ್ಲಿ ನಮ್ಮ ನಗುವನ್ನು ಮಾತ್ರ ನೋಡಲು ಬಯಸುತ್ತಾರೆ, ಅಳುವನ್ನಲ್ಲ. ಸಂತೋಷ ಏನಿದ್ದರೂ ಹೊರ ಜಗತ್ತಿಗೆ, ನೋವು ಸಂಕಟ ನಮ್ಮ ಒಳಗೆ ಇರಬೇಕು. ನಕ್ಕಾಗ ಜೊತೆಗಿದ್ದವರು, ಅಳುವಾಗ ನಮ್ಮ ಪರಿಸ್ಥಿತಿಯನ್ನು ನೋಡಿ ಬೇಸರದಿಂದ ದೂರ ಹೋಗ್ತಾರೆ. ಆದಷ್ಟು ಸಂತೋಷದಿಂದ ಇರಬೇಕು ಅಷ್ಟೇ

-


16 JAN 2021 AT 18:22

ನಮಗೆ ಉತ್ತಮ ಅರೋಗ್ಯವನ್ನು, ಯಾವುದೇ ಊನವಿಲ್ಲದ ಅಂಗಾಗವನ್ನು, 3 ಹೊತ್ತು ಊಟಕ್ಕೆ ದಾರಿ ಮಾಡಿಕೊಳ್ಳಲು ಬುದ್ಧಿಯನ್ನು, ಕೊಟ್ಟಿರುವ ದೇವರಿಗೆ ಒಮ್ಮೆಯಾದರು ಧನ್ಯವಾದ ಹೇಳದೆ ಹೋದರೆ ಹೇಗೆ.

-


26 NOV 2020 AT 22:29

ಬಿದ್ದಾಗ ಕೈ ಹಿಡಿದು ಎತ್ತಲು ನಿನ್ನ ಪಕ್ಕ ಯಾರಾದರೂ ಇದ್ದೇ ಇರುತ್ತಾರೆ ಎಂಬ ಮೂಢನಂಬಿಕೆಯಿಂದ ಜೀವನ ನಡೆಸುವ ಬದಲು, ಯಾರಿಲ್ಲದಿದ್ದರೂ ಸ್ವಸಹಾಯದಿಂದ ನಾನು ಮೇಲೆದ್ದು, ಮುನ್ನಡೆದು ನನ್ನ ಗುರಿ ತಲುಪುವೆ ಎಂಬ ನಿರ್ಣಯಕ್ಕೆ ಬರಬೇಕು.

-


26 NOV 2020 AT 22:23

ಸ್ನೇಹವೇ ಆಗಲಿ, ಸಂಬಂಧವೇ ಆಗಲಿ, ಅದರ ಅನುಭವ ಅನುಭವಿಸಿಯೇ ತಿಳಿಯಬೇಕು, ಏಕೆಂದರೆ ಅದರ ಆಳ, ಅಗಲ, ಆಗಲೇ ತಿಳಿಯುವುದು.

-


26 NOV 2020 AT 22:20

ಅವಶ್ಯಕತೆ ಎಂಬ ತೆವಲಿಗೋಸ್ಕರ ಬರುವವರನ್ನು ಮುಲಾಜಿಲ್ಲದೆ ದೂರವಿಡಿ. ಏಕೆಂದರೆ, ಅವರ ತೆವಲು ತೀರಿದ ಮೇಲೆ, ನಿಮ್ಮ ಅವಶ್ಯಕತೆ ಬೇಕಾಗಿರುವುದಿಲ್ಲ.

-


25 NOV 2020 AT 15:06

ಅರೋಗ್ಯ ಸರಿ ಹೋಗಬೇಕೆಂದರೆ ಹೇಗೆ ಔಷಧಿ ಕಹಿಯಾಗಿದ್ದರು ಸೇವಿಸುತ್ತೇವೋ, ಅಂತೆಯೇ ಸಾಧಿಸಲೇ ಬೇಕು ಎಂದು ಅಂದುಕೊಂಡಾಗ ಎಂತಹ ಕಠಿಣ ಪರಿಶ್ರಮಕ್ಕೂ ಸಿದ್ಧರಾಗಿಬಿಡುತ್ತೇವೆ.

-


25 NOV 2020 AT 15:02

ಅನಿವಾರ್ಯತೆ ಎಂದು ಬಂದಾಗ ಮನುಷ್ಯ ಎಂಥಹದ್ದೇ ಕಷ್ಟ ಎದುರಾದರೂ ಜಯಿಸಬಲ್ಲ.

-


Fetching Pradeep Keshava Quotes