Philomena dsouza  
39 Followers · 9 Following

Philomenadsouzably@gmail.com
Joined 7 January 2021


Philomenadsouzably@gmail.com
Joined 7 January 2021
4 MAY 2022 AT 19:07

ನನ್ನ ಸ್ರಷ್ಟಿಯು ನಿನಿಂದ್ಲೇ
ಆಗಿರುವಾಗ ನಿನ್ನ ವಿರುದ್ದ
ಟೊಂಕ ಕಟ್ಟಿ ಗೆಲ್ಲಲಾದೀತೆ.
ನನ್ನೊಳಗೆ ಅರಿವಿನ ಗಂಟನ್ನು
ಇಟ್ಟು ಧರೆಗೆ ಎನಗೆ ಇಳಿಸಿದೆ
ಎಂದ ಮೇಲೆ, ನಿನ್ನ ಹಿತ
ಶತ್ರುವಾಗಿ ಬೆಳೆಯಲಾದೀತೆ.
ಮಾತೃ, ಪಿತೃ, ಬಂಧು ಬಳಗದವರ
ಪ್ರೀತಿ, ವಾತ್ಸಲ್ಯ, ಎಲ್ಲವ ನೀಡುತಿಹ
ನಿನಗೆ ನಾನು ದೂರ ಮಾಡಲಾದೀತೆ.

-


3 MAY 2022 AT 9:11

ಲಿಂಗ ಧಾರಣೆ ಮಾಡುತಾ
ಕಾಯಕದಲಿ ತಲ್ಲೀನನಾದೆ
ಕಾಯಕವೇ ಕೈಲಾಸವೆಂದು
ಜನರಿಗೆ ಸಾರಿ ಹೇಳಿದೆ.
ತೋರಿಕೆಯ ಭಕ್ತಿಯಿಂದ
ಫಲ ಬರುವುದಿಲ್ಲವೆಂದೇ.
ಅಂತರ್ ಬಹಿರಂಗ ಶುದ್ಧಿಯ
ತತ್ವವನೂ ಸಾರಿ ಹೇಳಿದೆ.
ನುಡಿಗೂ ಕ್ರತಿಗೂ ಹೊಂದಾಣಿಕೆ
ಕಾಣಲಿ ಎಂದು ಸಾರಿ ಹೇಳಿದೆ.
ತತ್ವಗಳು ಭಾವಗಳಾಗಲಿ
ಎನುತ ಸಾರಿ ಹೇಳಿದೆ.
ಸನ್ಮಾನ ದೊಡ್ಡದಲ್ಲ
ಸಂಸ್ಕಾರ ದೊಡ್ಡದು
ಹಣ ದೊಡ್ಡದಲ್ಲ
ಗುಣ ದೊಡ್ಡದು ಎಂದೆ.


-


29 APR 2022 AT 10:12

ಕೊನೆ ಉಸಿರು ಇರುವವರೆಗೂ, ತನ್ನ
ಕನಸಿನಂತೆ ಎಲ್ಲವ ಅನುಭವಿಸಿ,
ಆನಂದಿಸಬೇಕೆಂಬ ಕನಸಿನ ಚಿತ್ರ
ಬಿಡಿಸಿಟ್ಟರೆ, ಆ ಕಲ್ಪನೆಯಿಂದ ಹೊರ
ಬನ್ನಿ.
ಯಾಕೆಂದರೆ, ಹುಟ್ಟಿನಿಂದಲೇ ಯೋಗ್ಯತೆ
ಪಡಕೊಂಡು ಬಂದಿರುವವ ಇದ್ದಾನೆ
ಎಂಬವನಿಗೂ, ಎಲ್ಲವ ಭೋಗಿಸುವ
ಭಾಗ್ಯ ಸಿಕ್ಕಿದ್ದು ಯಾರೂ ನೋಡಿಲ್ಲ.







-


10 APR 2022 AT 4:25

ಇಂತಿಷ್ಟೇ ಗಳಿಗೆಗೆ ಒಂದು ಜೀವಿ
ಮತ್ತು ವಸ್ತುವಿನ ಹುಟ್ಟಾಗಿದೆ, ಎಂದು
ನಿರ್ದಿಷ್ಟವಾಗಿ ಸ್ಪಷ್ಟವಾಗಿ ಹೇಳಿದವರಿಲ್ಲ,
ಹುಟ್ಟಿನ ಗುಟ್ಟನ್ನು ರಟ್ಟು ಮಾಡಿದವರಿಲ್ಲ.

ಕವಿಗಳಿಗೆ ಕಥಾ ವಸ್ತು ಯಾವಾಗ ಸಿಗುತ್ತೆ
ಮನಸಲ್ಲಿ ಮೂಡುತ್ತೆ, ಎಂಬುದೇ ತಿಳಿದಿರುವುದಿಲ್ಲ,
ಯಾವಾಗ ಕವಿಗಳಾಗುವ ಕಿಡಿ ಅಚ್ಚುತ್ತೋ
ಗೊತ್ತಿರುವುದಿಲ್ಲ, ಬರವಣಿಗೆಯ ಹುಟ್ಟು
ಅನಿರೀಕ್ಷಿತ, ತಕ್ಷಣವೇ ಗಿಚಬೇಕು. ವಾಚಿಸುವ, ಬರೆಯುವ ಗೀಳು ಮುಂದುವರಿಯಬೇಕು.

-


29 JAN 2022 AT 11:18

ಐದನೇ ತರಗತಿಯಲ್ಲಿ ಓದುತ್ತಿರುವಾಗ,
ನಿಮ್ಮ ಮನೆಯ ಅಂಗಳಕೆ ಬಂದು ಬುಗುರಿ
ಆಟ ಆಡುವ ಆಶೆಯ ನಿನ್ನಲ್ಲಿ ಹೇಳಿದಾಗ,
ನೀ ನಿಮ್ಮ ಹಿತ್ತಲಲ್ಲಿದ್ದ ಬುಗುರಿ ಮರದ ಕೆಳಗೆ
ಕುಳಿತುಕೊಳ್ಳಲು ಮಣೆಯನ್ನಿಟ್ಟು ನನ್ನ ಕಣ್ಣಲ್ಲಿ
ನಿನ್ನ ದ್ರಷ್ಟಿಯ ಮೇಳೈಸಿದಾಗ ಚಿಗುರೊಡೆದ
ಪ್ರೀತಿಯಲ್ಲಿ ಯಾವತ್ತೂ ಇಳಿಮುಖ ಕಂಡಿರಲಿಲ್ಲ.
ಇಬ್ಬರೂ ಒಂದೆಡೆ ನಿಂತು, ಮಾತನಾಡದ,
ನೋಡದ ದಿನಗಳಿರುತ್ತಿರಲಿಲ್ಲ, ಪರಸ್ಪರರು ಯಾವತ್ತೂ ನಿಂದಿಸಿ,
ದೂಷಿಸಿ ಮಾತಾಡಿದವರಲ್ಲ,
ಎಲ್ಲವನ್ನೂ ಮನಬಿಚ್ಚಿ ಮಾತನಾಡುತ್ತಿದೆವು.
ಅಂತಹದರಲಿ, ಹದಿನೈದು ವರ್ಷಗಳ ನಂತರ
ನಿನ್ನ ಜೀವನ ಸಂಗತಿಯನ್ನಾಗಿ ಮತ್ತೊಬ್ಬಳನ್ನು
ಆರಿಸಿ, ಆಮಂತ್ರಣ ಪತ್ರಿಕೆಯನ್ನು ನನ್ನ ಕೈಗೆ ಇತ್ತು
ನಾನು ಮದುವೆಯಾಗುತ್ತೇನೆ ಎಂದು ಹೇಳುವುದನ್ನು
ಕೇಳಿ ಆಶ್ಚರ್ಯವಾಯಿತು. ನಾನು ಬಯಸಿದ್ದು
ಒಂದಾದರೆ ಭುವಿಯು ಬಗೆದಿರುವುದು ಮತ್ತೊಂದು.
ಆದ್ದರಿಂದ ಒಪ್ಪಲೇಬೇಕು.

-


27 JAN 2022 AT 18:36

ಮನಸ್ಸಿನ ಶಾಂತತೆಯನ್ನ ಕಲಡುತಿಹ
ವಿಕಾರಯುತ ಸಂಜ್ಞೆಗಳನ್ನ ಹೊರ ಚೆಲ್ಲುತಿಹ
ವಿಕೃತಿ ಜೀವನದಿಂದ ಬೇಸರ ಹೊಂದಿಹ
ಪ್ರಶ್ನೆಗಳ ಸುರಿ ಮಳೆಗೆ ಉತ್ತರ ಹುಡುಕಿ ಸೋಲುತಿಹ,
ಪ್ರಯಾಸದ ಬದುಕನ್ನ ಕೊನೆಗಾಣಿಸಲು,
ಹೊಸ ಬದುಕಿನ ಅನುಭವ ಪಡೆಯಲು,
ನಾನು ಅಂತರ್ಮುಖಿಯಾಗಬೇಕು.

ಎದುಸಿರು ಬಿಡುತ್ತಾ ಸಾಗುವ ಸಿಡಿಮಿಡಿಯುವ
ಜಂಜಾಟದ ಸಂಸ್ಕೃತಿಯ ಕೊಂಡಿಯನ್ನ
ಮುರಿಯಲು, ಪ್ರಕೃತಿಯ ಮಡಿಲಲ್ಲಿ
ಲೀನವಾಗಬೇಕು, ನಿಶಬದ್ಧತೆಯ ಸವಿಯನ್ನ
ಉಣಬೇಕು, ಧ್ಯಾನಸ್ಥಿತಿಗೆ ಹೋಗಬೇಕು,
ಮನಸ್ಸಿನ ಶಾಂತವಾಗಿಡಲು ಶಾಂತಚಿತ್ತಳಾಗಬೇಕು.
ಆತ್ಮದ ಜೊತೆಗೆ ಒಂದಾಗಬೇಕು.


-


27 JAN 2022 AT 17:22

first check from which direction
fear begins to spread,
fools the people and disturbs
their normal, happy and peaceful life.
By catching the clues, boldly
stand infront of fear and confront,
say that"myself and my team is strong, determined, hard working and efficient.
Hence you can't destroy our
integrity." This way withdraw from
fear.


-


17 OCT 2021 AT 8:04

ಉತ್ಪ್ರೇಕ್ಷೆಗೆ ಒಳಗಾದ ನೆರಳು,
ಸೂರ್ಯನ ಬೆಳಕಿನಲಿ ಮಾಯವಾಗಲಿ.
ಮುಂಜಾನೆ ಹಾಸಿಗೆಯಿಂದ ಎದ್ದಾಗ
ಅನುಭವಿಸಿದ ಉಸಿರೇ, ಹೊತ್ತು ಮುಳುಗಿ
ನಿದ್ದೆಗೆ ಜಾರುವವರೆಗೂ ಸ್ಥಿತ ಪ್ರಜ್ಞೆಯಲ್ಲಿರಲಿ.
ಗಾಢ ನಿದ್ದೆಯು ನಿಮ್ಮದಾಗುವುದು.

ಪ್ರತೀ ನಿತ್ಯ ಕ್ರಮದ ಜೀವನ ಮುಂದುವರಿದಲ್ಲಿ
ನಡೆ ನುಡಿಯಲ್ಲೂ ಸಹಜತೆಯು ಕಂಡು
ಜೀವನ ಪ್ರಕಾಶಮಾನವಾಗುವುದು.
ನಗು ಮುಖದಲ್ಲಿ ಚಿಗುರುವುದು,
ಮತ್ತೆ ಹರಿಯುತ್ತಾ ಎಲ್ಲರಲಿ ಹಂಚಿ ಹೋಗುವುದು.
ಪ್ರೀತಿಯ ಚಿಲುಮೆ ಹುಕ್ಕಿ ಎಲ್ಲೆಡೆ ಹಬ್ಬುವುದು.

-


13 SEP 2021 AT 16:42

ಚಂದ್ರನ ಬೆಳದಿಂಗಳಂತಿಹ ನಿನ್ನ ಅಂದವು,
ಕಣ್ಣು ರೆಪ್ಪೆಗಳ ಮಿಟುಕಿಸಲು ಬಿಡದ,
ಸೌಂದರ್ಯವ ಸವಿಯುವ ಚೆಂದವು,
ಮುದ್ದು ಮಗುವಿನ ಕೆನ್ನೆಗಳಿಂದ ಹೊರ ಸೂಸುವಂತಹ ಬಿಂಬವು,
ತಾಯಿಯ ಸ್ವರ ಕೇಳಿ ಮಂದ ಹಾಸ
ಬೀರಿ ಮುಸು ನಗೆಯ ಚೆಲ್ಲುವಂತಹ, ನೆಮ್ಮದಿಯ ವಾತಾವರಣದಲಿ ಬದುಕಲು ದಾರಿಯಾಗುವ, ಆನಂದವ ಬೀರುವ ಹೂವಾಗಿ ಕಾಣುತಿಯಾ.


-


13 SEP 2021 AT 10:51

Rita: Baby is sleeping. If, loudly speak
I fear that child will wake up
Mona: Oho!!

-


Fetching Philomena dsouza Quotes