Nikhil Honnalli   (© ನಿಖಿಲ್‌ ಹೊನ್ನಳ್ಳಿ)
753 Followers · 100 Following

read more
Joined 20 July 2018


read more
Joined 20 July 2018
11 SEP 2022 AT 19:34

ಗಾಢ ರಾತ್ರಿಯ ಅಂದಗೊಳಿಸಲು
ಬೆಳದಿಂಗಳ ತೇಯ್ದು ನಿನ್ನ
ವದನಕೆ ಲೇಪಿಸಲೇ?
ಅಬ್ಬ! ದರೋಡೆ ಮಾಡಿದ
ಬೆಳದಿಂಗಳ ಹುಡುಕಲು
ಚಂದ್ರನು ಬಂದರೆ, ತುಸು ನೀನೇ
ಸಂಭಾಳಿಸುವೆಯಾ?
ನಾ ನಿನ್ನ ಮರೆಯಲ್ಲೇ ನಿಂತಿರುವೆ
ಅಂಜಿಕೆಯ ಹಿಂಬಾಲಿಸಿ!

-


20 MAY 2022 AT 21:37

ಹಿಂದೊಮ್ಮೆ ಹಿತವಾದ ಭೇಟಿ ಅವಳರಮನೆಯಲ್ಲಿ,
ಮತ್ತೆ ಸಿಹಿ ರೂಪದ ದಾಟಿ ಮಿಠಾಯಿ ಅಂಗಡಿಯಲ್ಲಿ,
ಸದ್ದಿಲ್ಲದೆ ನುಸುಳಿ ಬಂದಳಾಕೆ ಎನ್ನ ಮನದಂಗಳಕೆ,
ಮನವು ಹಿಗ್ಗಿ ಹುಡುಕುತ್ತಿತ್ತು ಅವಳನ್ನೆ ನೆನಪಿಸಿತ್ತು,
ಒಲವ ಸಾಗರದ ಅಲೆಗಳು ಏರಿಳಿತವಾಗಿ ಬಿತ್ತರಿಸಿವೆ,
ನನ್ನೆದೆಯ ವಾಹಿನಿಯಲ್ಲಿ ಬರೀ ಅವಳದೇ ವಾಣಿ!

ನೋಟದ ಸನ್ನೆ ನಾಚಿಕೆಯ ಮೂಡಿಸಿದೆ ವದನದಲ್ಲಿ,
ನಗುವಿನ ನೃತ್ಯವದು ಖಾಯಂ ನೆಲೆಸಿದೆ‌ ತುಟಿಗಳಲ್ಲಿ,
ಶುರುವಾಗಬಹುದು ಸ್ವಪ್ನದಲ್ಲೂ ಅವಳ ಕನವರಿಕೆ,
ಮೈಮರೆತರೆ ಎದುರಾಗಬಹುದು ಹೃದಯಕ್ಕಾಪತ್ತು,
ರವಾನಿಸಿದ ಸಂದೇಶಗಳೆಲ್ಲ ತಡೆ ತಡೆದು ವಿಸ್ತರಿಸಿವೆ,
ನನ್ನೆದೆಯ ವಾಹಿನಿಯಲ್ಲಿ ಬರೀ ಅವಳದೇ ವಾಣಿ!

-


31 MAY 2021 AT 17:52

ಹಿರ್ಯಾರ ಹೇಳ್ತಿದ್ರ "ಈ ಮದ್ವಿ ಗಿದ್ವಿ ಎಲ್ಲಾ ಸ್ವರ್ಗದಾಗ ನಿಶ್ಚಯ ಆಗಿರ್ತಾವಂತ"

ಈಗ ಅದ ಹಿರ್ಯಾರ ಮುಂದ್ ನಿಂತ್ ಅಲ್ಲ, ಹೊಲದಾಗ ನಿಂತ ಮದ್ವಿ ಮಾಡಾತಾರ.

|ಹಿರಿಯಾಸೆ|
ಮದುವೆಯ ಮಮತೆಯ ಕರೆಯಲೊಲ್ಲೆ

-


16 MAR 2020 AT 23:24

ಅವಳೇನು ನಸುಕಿನ ಕನಸಲ್ಲಿ ಬಂದವಳಲ್ಲ
ಮುಂಜಾನೆಯ ಮೌನದಲ್ಲಿ ಕಣ್ಣಿಗೆ ಬಿದ್ದವಳಲ್ಲ
ಪಕ್ಕದಲ್ಲೇ ಕೂತು ಸೊಗಸಾಗಿ ಕಿವಿಯಲ್ಲಿ ರಿಂಗಣಿಸಿ
ತೂಕಡಿಸುವ ಕಾಯವ ನಿಚ್ಚಳಿಸಿ
ಹಿತವಾಗಿ ಹಿತನುಡಿಗಳ ಹೇಳಿಸಿದವಳು.

ಸಂಜೆಗೆಂಪು ಸೂರ್ಯ ಸರಿದ ಮೇಲೆ
ಬರುವಳು ರಾತ್ರಿ ಕಾಣದ ಬೆಳ್ಳಿ ಮೋಡವಾಗಿ,
ಸುರಿಸುವಳು ಭಾವನೆಗಳ ಸವಿ ಮಳೆಯ
ವೇಳೆಯ ಅರಿವಿಲ್ಲದೆ ಚಿಟಪಟ ನಿನಾದದಲಿ.

ಎಡೆಬಿಡದೆ ಮಳೆಯ ಸುರಿಸಿದವಳು ಈಗೆಲ್ಲಿ?
ಚಲಿಸಿದಳು ಕಂಡ ಕನಸುಗಳ ನನಸಾಗಿಸಲು,
ನಡೆಯುತಿರುವಳು ಗೊತ್ತಿರುವ ಕಾರಣವ ಕೋಪಿಸುತ್ತ.
ಅವಳು ನಿರೀಕ್ಷೆ ಎಂಬ ಶೀರ್ಷಿಕೆಗೆ ಹೊಸ ಸೇರ್ಪಡೆ
ಆ ಕೋಣೆಯ ಮಂದ ಬೆಳಕಿನಲಿ,
ಅದೇನೋ ನಿಶ್ಯಬ್ದತೆ ಈ ರಾತ್ರಿಯಲಿ...

-


2 DEC 2021 AT 8:11

ಸತಾಯಿಸುತಿದೆ ಕಾಲವು ಭೇಟಿಯ ಬೇಟೆಯಾಡಿ,
ಮೊಗ್ಗು ಕೆಲ ಮನಮೋಹಕ ಸನ್ನೆಗಳ ಮಡಚಿಟ್ಟಿದೆ,
ಹಿಡಿತವಿಲ್ಲ ಹಿಡಿದ ಸಿಹಿ ಗುಂಗಿನ ಪರಿಭ್ರಮಣೆಗೆ,
ದಿಂಬಿನ ಮಗ್ಗುಲಲ್ಲಿ ಮಲಗಿವೆ ಸಜೀವ ಆಸೆಗಳು,
ನಡುರಾತ್ರಿ ಕೂತು ಕನಸುಗಳ ನೀ ಎಚ್ಚರಿಸುವಾಗ;
ಹಠಾತ್ತನೆ ತೋರುವ ಹಠವು ಪ್ರೇಮ ನಿವೇದನೆ!

ಕಿರುನಗೆಯ ಕೀಟಲೆ ಶುರು ಭಾವಗಳು ಸೆಣಸಾಡಿ,
ಹೃದಯವಿದು ಒಲವ ಪಿಸುಮಾತಿಗೆ ನರ್ತಿಸುತಲಿದೆ,
ಪ್ರೇಮ ಪರ್ಯಟನೆಗೈದು ಕೆಟ್ಟು ನಿಂತಿದೆ ಸಾರಿಗೆ,
ಪದಗಳಲ್ಲಿ ನೀ ಪದ್ಯವಾಗಲು ಇವೆ ಹವಣಿಕೆಗಳು,
ಇನ್ನಿತರ ಖಾಸಗಿ ಯಾತನೆಗಳ ನೀ ಕದ್ದಾಲಿಸುವಾಗ;
ಹಠಾತ್ತನೆ ತೋರುವ ಹಠವು ಪ್ರೇಮ ನಿವೇದನೆ!

-


26 JUL 2021 AT 18:18

ಮಬ್ಬು ಮುಸುಕಿದ ಬಾನಂಗಳದಿ ಚೆಲುವೆ,
ಅವಳ ಕಣ್ಸನ್ನೆಗಳ ನೋಡಿ ತುರ್ತು ಕವಿತೆಯು
ಹವಣಿಸಿ ಹಠ ಹಿಡಿದಿದೆ ಗೀಚಿಸಿಕೊಳ್ಳಲು
ಎನ್ನ ತೋರು ಬೆರಳುಗುರ ಮೇಲೆ ಕುಳಿತು;
ಕೂಲಂಕಷ ಭಾವನೆಗಳು ಅರ್ಧಕ್ಕೆ ನಿಂತಿರಲು,
ಎಚ್ಚರಿಕೆ ನೀಡದೆ ಅಪಹರಿಸು ನೀ ನನ್ನನು!

ಸತಾಯಿಸಿದವಳ ವದನದಲ್ಲಿಲ್ಲ ಮೊಡವೆ,
ತೀವ್ರ ಬೆಳದಿಂಗಳ ಹೊಳಪಿನ ಸಣ್ಣ ಕಿಡಿಯು
ಧಾವಿಸಿ ಕೇಳಿದೆ ಗುಟ್ಟೊಂದ ವಿವರಿಸಲು
ಮರಳಿ ಬಂದು ಚಂದಿರನ ಜೊತೆ‌ ಬೆರೆತು;
ಸನಿಹದಲ್ಲಿ ಸಂಧಿಸಿ ಸಲೀಸಾಗಿ ಸಾಗುತಿರಲು,
ಎಚ್ಚರಿಕೆ ನೀಡದೆ ಅಪಹರಿಸು ನೀ ನನ್ನನು!

-


9 MAR 2021 AT 10:24

ಎಲ್ಲೆ ಮೀರಿದ ದೃಷ್ಟಿಕೋನಗಳು ಬದಲಾಗಿವೆ,
ಹೇರಳವಾಗಿದ್ದ ಹೇಳದೆ‌ ಉಳಿದ ಭಾವ ನನ್ನಲಿದೆ,
ಕೆಲವೆನಲ್ಲ ಹಲವು ಭಾವನೆಗಳ ಲಗತ್ತುಗಳಿವೆ,
ಅವಳನ್ನೊ ಕಾವ್ಯೋತ್ಸವ ತಟಸ್ಥ ರೂಪ ಪಡೆದಿದೆ,
ಹೀಗೆ ಬರೆಯುವಾಗ ಅಸುನೀಗಲು ಲವಲವಿಕೆ,
ಮರಳಿ ಸಿಗುವೇ ನಾ ನೀ ಬರೆವ ಪದಗಳಲ್ಲಿ!

ಕಿಟಕಿಯ ಕಂಬಿಗಳೆಲ್ಲ ಹೊಸ ಬಣ್ಣ‌ ತೊಟ್ಟಿವೆ,
ಒಂಟಿ ಮೌನವು ಜಂಟಿಯಾಗಿ ಗೀತೆಯ ಹಾಡಿದೆ,
ಮನಸುಗಳ ಸಾಂಗತ್ಯಕೆ ವಿಭಿನ್ನ ಟಿಸಿಲುಗಳಿವೆ,
ಕನಸ ನನಸಾಗಿಸೊ ವಿಧಾನವು‌ ವಿಸ್ತೀರ್ಣವಾಗಿದೆ,
ಇನ್ನೂ ನನ್ನಲ್ಲಿವೆ ಬರೀ ಇಂಥವೇ ಗುನುಗುವಿಕೆ,
ಮರಳಿ ಸಿಗುವೇ ನಾ ನೀ ಬರೆವ ಪದಗಳಲ್ಲಿ!

-


20 DEC 2020 AT 20:10

ಮುಗಿಯದಿರುವ ಮಾತಿಗಿಳಿದು ಭಾವನೆ
ಎದುರೆದುರಲ್ಲೇ ನಡೆದಿದೆ ಸಮ್ಮೇಳನ
ಕವಿಗೋಷ್ಠಿಗೆಂದು ಬರೆದಿಟ್ಟ ಕವನ
ಕಿರಿದಾಗಿದೆ ಪದಗಳ ಅಭಾವಕೆ
ಮತ್ತೊಮ್ಮೆ ಬರೆಯುವೆ ನಾ
ನಿನ್ನನ್ನೇ ಕಲ್ಪನೆಯಲಿಟ್ಟು
ತೂಗುವ ಜುಮುಕಿಗೆ
ದೃಷ್ಟಿಬೊಟ್ಟನಿಟ್ಟು
ಬಿಳಿ ಹಾಳೆಗೆ
ಮಸಿಯ
ಕೊಟ್ಟು
💙

-


18 DEC 2020 AT 21:47

ಸನಿಹವಿರದ ಸರಳ ಸುಂದರ‌ ಅಂದಗಾತಿ
ನತ್ತಿನ ಗತ್ತಿಲ್ಲದ ನೀಳವಾದ ಮೂಗಿನ ಮೂಗುತಿ
ಝೇಂಕರಿಸಿದೆ ಜುಮುಕಿಯ ಹೊಳಪು
ಬೆಳದಿಂಗಳ ಮಂದ ಬೆಳಕಿಗೆ ಪೈಪೋಟಿಗಿಳಿದು!
ಬಿಡಿಸುವ ಚಿತ್ತಾರವದು ಮೈಮರೆಸುವ ದೃಶ್ಯ ಕಾವ್ಯ
ಕವಿತೆಗಳ ಸಂಕಲನದಿ ಭಾವನೆಗಳ ಗುಣಾಕಾರ
ಸುಮ್ಮನಿದ್ದ ಸ್ವರಗಳು ಸಂಗೀತವಾದವು ಶೃತಿ ಸೇರಿದಾಗ!
ಅವಳೆಂದರೆ ಕಪ್ಪು ಬಿಳುಪಿನ ವೃತ್ತದಲ್ಲಿ
ಕಡು ನೀಲಿ ಬಣ್ಣದುಡುಗೆಯನುಟ್ಟು ಕಥೆಗಳಲ್ಲಿ
ಮಧ್ಯವರ್ತಿಯಾಗಿ ಬರುವ ವೃತ್ತಿದಾರಳು!

-


17 DEC 2020 AT 18:30

ನಾಳೆಯ ಮುಂಜಾವಿನ ಪಾಳಿಗೆ
ತಯಾರಿರಲು ಹೊರಟಿಹನು ಭಾಸ್ಕರ,
ಜನಹಿತಕ್ಕಾಗಿ 'ಜಾರಿ'

-


Fetching Nikhil Honnalli Quotes