Local Leader Basu Patil   (Local Leader)
42 Followers · 126 Following

read more
Joined 20 April 2020


read more
Joined 20 April 2020
21 MAR AT 22:04

ಕಂಗಳಲ್ಲೇ ನನ್ನ ಮೋಡಿ ಮಾಡಿ ಮುದ್ದಾದ ನಗುವಿನಲ್ಲೇ ಹಾಯೆನಿಸಿ ತುಂಟ ತುಟಿಗಳಲ್ಲೇ ನನ್ನ ಸೆಳೆವ ಸುಂದರವಾದ ಚೆಲುವೆ ಅವಳು!
ಆ ಮುದ್ದಾದ ಚೆಲುವೆಯ ಹೆಸರೇ ( ಯಶು )

-


31 JAN AT 15:23

ಸೃಷ್ಟಿ
ಬ್ರಹ್ಮ ತುಂಬಾ ಸಮಯ ತೆಗೆದುಕೊಂಡೇ ಮಾಡಿರಬೇಕು ಅವಳ ಸೃಷ್ಟಿ ಏಕೆಂದರೆ ಅವಳ ಅಂದ ಚೆಂದಕ್ಕೆ ಯಾರೂ ಕೂಡ ಇಲ್ಲ ಸರಿಸಾಟಿ... ಆ ದೇವರಲ್ಲಿ ನಾ ಬೇಡುವುದೊಂದೇ, ಬೀಳದಿರಲಿ ಅವಳ ಮೇಲೆ ಯಾರದೂ ದೃಷ್ಟಿ!
ಬ್ರಹ್ಮ ಕೆತ್ತಿದ ಆ ಸುಂದರ ಶಿಲ್ಪದ ಹೆಸರೇ ( ಸೃಷ್ಟಿ )

-



ಪ್ರಿಯಾ
ಕಾಮನಬಿಲ್ಲಿಗಿಂತ ಸುಂದರವಾದ ಅಂದಚೆಂದ ಅವಳದು, Laughing ಬುದ್ಧ ಸಹ ನಾಚುವಂತ ಮುದ್ದಾದ ನಗು ಅವಳದು ಅಷ್ಟು ಮುದ್ದಾಗಿ ನಗುವ ಅವಳೆಸರೇ ಪ್ರಿಯ!

-



ನಿನಗೆ ಉಚಿತ ಬಸ್ ಪಾಸ್ ಕೊಡೋಕೆ ನಾನು ಸಿದ್ದರಾಮಯ್ಯ ಅಲ್ಲ, ನಿಮ್ ಅಮ್ಮನಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡೋಕೆ ನಾನು ಯಡಿಯೂರಪ್ಪ ಅಲ್ಲ, ನಿಮ್ ಅಪ್ಪನ ಸಾಲ ಮನ್ನಾ ಮಾಡೋಕೆ ಕುಮಾರ ಸ್ವಾಮೀನು ನಾನಲ್ಲ!,BPL ಅನ್ನದ ಜೊತೆ ಮುದ್ದೆ ಬಸ್ಸಾರ್ ಉಣಿಸೊ ಅತ್ಯಂತ ಶ್ರೀಮಂತ ಬಡವ ನಾನು!..

-



ಹುಡುಕಿದಷ್ಟು ಸಿಗುವ ಸಿಹಿ ನೆನಪುಗಳು ಕೆದಕಿದಷ್ಟು ಕಾಣುವ ಕಹಿ ಘಟನೆಗಳು ಎಲ್ಲೋ ಬೊಗಸೆಯಷ್ಟು ಸಂತೋಷ ಇನ್ನೆಲ್ಲೋ ಒಂದಿಷ್ಟು ದುಃಖ...! ಎಲ್ಲವನ್ನು ಸಹಿಸಬೇಕು ಎಲ್ಲವನ್ನು ಗೆಲ್ಲಬೇಕು ಇರುವುದು ಮಾತ್ರ ನಿಜ ಇಲ್ಲದಿರುವುದೇ ಒಂದು ಸಜ ದಿನವುರುಳುವುದು ನಿಲ್ಲಲ್ಲ ಹೊಸ ದಿನ ಹುಟ್ಟುವುದು ಸುಳ್ಳಲ್ಲ ಭಾನಿಗೊಬ್ಬನೆ ಸೂರ್ಯ ಭೂಮಿಗೊಂದೇ ಭಾನು ಮನಸಿನ ಕಲ್ಮಶ ತೊಳೆಯುವ ತನಕ ಇಲ್ಲಾವುದು ಹೊಸದಲ್ಲ ಹೊಸ ಹುರುಪಿನ ಅಲೆಯಲಿ ಸಮನಾಗಿ ತೇಲೋಣ ಹೊಸ ಕನಸುಗಳ ಕೊಳದಲಿ ಮೀನಾಗಿ ಈಜೋಣ ಹೊಸ ವರುಷವ ಹೊಸತನದಲಿ ಸ್ವೀಕರಿಸೋಣ ಬಾಳ ಪಥವ ಸ್ಮರಣೀಯವಾಗಿಸೋಣ... ಹೊಸ ವರ್ಷದ ಶುಭಾಶಯಗಳು 🤗

-


16 DEC 2023 AT 11:13

ಈ ಹೃದಯವ ಕದ್ದ ಆರೋಪದ ಮೇಲೆ ನಿನಗೆ ಜೈಲು ಶಿಕ್ಷೆಯಾಗಿ, ನಂತರ Bail ಮೇಲೆ ಬಿಡುಗಡೆಯಾಗುವುದಕ್ಕಿಂತ ಒಲವ ಪ್ರಸ್ತಾಪವ ಅಂಗೀಕರಿಸಿ ನನ್ನ ಅರ್ಧಾಂಗಿಯಾಗಿ, ಬೇಲ್ ಪುರಿ ತಿನ್ನಲು ಜೊತೆಯಾಗಬಾರದೇ?

-


6 DEC 2023 AT 18:03

*ಅಪ್ಪ*
ಅಪ್ಪನ ಕೋಪದಲ್ಲಿ ಹೇಳಿಕೊಳ್ಳದ
ಆಕಾಶದಷ್ಟು ಪ್ರೀತಿ ಇದೆ...
ತನ್ನ ಮಗ ಚೆನ್ನಾಗಿ ಇರಬೇಕೆಂಬ
ಕಾಳಜಿ ತುಂಬಾ ಇದೆ....!
ಅಪ್ಪನಿಗಾಗಿ ನಾವು ಮಾಡೋದು
ಎಳ್ಳುಕಾಳಷ್ಟು... ಅಪ್ಪ ನಮಗಾಗಿ
ಮಾಡೋದು ನಾವು ಸಾಯುವ
ತನಕ ಇರೋವಷ್ಟು...!
ಅಪ್ಪನ ಋಣವನ್ನು ತೀರಿಸಬಹುದಾ
ನನ್ನ ಈ ಜನ್ಮದಲ್ಲಿ...
ತೀರಿಸಲಾಗದೆ ಹಾಗೆ
ಉಳಿಯುವೆ ನಾನು
ಪ್ರತಿ ಜನ್ಮದಲ್ಲಿ...!

-


28 NOV 2023 AT 11:00

ಕೀರ್ತಿ
ಅವಳು ಸುಂದರ ನಗುಮುಖದ ಒಡತಿ
ಆ ನಗುವ ಕಂಡರೆ ಸಾಕು ಹುಟ್ಟುವುದು ಪ್ರೀತಿ
ಅವಳ ನಗುವೇ ಎಲ್ಲರಿಗೂ ಸ್ಫೂರ್ತಿ
ಅದು ಯಾವಾಗಲೂ ಇರಬೇಕು ಅದೇ ರೀತಿ!
ಅಷ್ಟು ಮುದ್ದಾಗಿ ನಗುವಳು ನಮ್ಮ ಕೀರ್ತಿ!

-


3 NOV 2023 AT 22:37

ವೇಶ್ಯಳಾದ ಹೆಣ್ಣಿನ ಕರುಳಿನ ಮಾತು,
ಸುಖ ಕೊಟ್ಟ ನಾ ಸುಳೆಯಾದರೆ ಸುಖಕ್ಕಾಗಿ ನನ್ನಲಿಗೆ ಬಂದ ಗಂಡು??

-


29 OCT 2023 AT 10:47

ದೇವರ ಆರಾಧನೆಗೆ ಬೇಕಾಗಿದ್ದು ಮಂತ್ರ ಪಠಿಸುವ ಸಾಮಾನ್ಯ ವ್ಯಕ್ತಿಯಲ್ಲ, ನಗುವಿನ ಒಡೆಯನೇ ಆಗಬೇಕಿತ್ತು... ಅವನ ಪೂಜೆಗೆ ಬೇಕ್ಕಾಗಿದ್ದು ಯಾವುದೋ ಚಂಡುಮಲ್ಲಿಗೆಯಲ್ಲ, ಬೆಟ್ಟದ ಹೂವು ಬೇಕಿತ್ತು ಎಲ್ಲವೂ ಅವನಿಚ್ಚೆಯಂತೆ......💔

-


Fetching Local Leader Basu Patil Quotes