Lipikaಸಿ   (Latha ಸಿ)
300 Followers · 1 Following

Amateur writer
⚕️
Joined 29 March 2020


Amateur writer
⚕️
Joined 29 March 2020
8 APR 2022 AT 19:13

ಮೌನಿಯಾಗಬೇಕಿದೆ ಒಮ್ಮೊಮ್ಮೆ
ಮನುಕುಲದೊಡನೆ ಮಂದಹಾಸದಿ
ಮುನ್ನಡೆಯಲು

ತೋರಿಕೆಯ ನಗೆಬೀರಬೇಕಿದೆ
ತಿಳಿಯದೆ ಅಪ್ಪಳಿಸುವ
ತೊಡಕುಗಳ ತುಂಡಾಗಿಸಲು

ಹುಂ ಊಹುಂ ಗಳಲ್ಲಿಯೇ
ಭಾವನೆಗಳ ಅಡಗಿಸಬೇಕಿದೆ
ಸಂಕಷ್ಟಗಳ ಹೊಡೆದೋಡಿಸಲು

ಅನವಶ್ಯಕರ ಮಾತುಗಳ
ಕರ್ಣಗಳ ಆದಿಯಲ್ಲೇ ಅಂತ್ಯಗೊಳಿಸಬೇಕಿದೆ
ಹೃದಯಂತರಂಗವ ನೆಮ್ಮದಿಯಾಗಿರಿಸಲು



-


20 OCT 2021 AT 2:33

....

-


15 JUN 2021 AT 8:57

.....

-


23 MAY 2021 AT 16:45

ಕಲ್ಪನೆಯ ಬೀದಿಯೊಂದರ ಅಂಚಿನಲಿ
ತರ ತರ ಪೋಷಾಕಿನ ರಂಗಿನಲಿ
ನೆನ್ನೆಗಳ ನೆನಪಿಲ್ಲದೆ
ನಾಳೆಗಳ ಸುಳಿವಿಲ್ಲದೆ
ವರ್ತಮಾನದ ಮಿಲನದಲಿ
ಅಲೆದಾಡುತಿದೆ ಮನ ಅರಿವಿಲ್ಲದ
ಅಲೆಮಾರಿಯಾಗಿ

ಜಾದು ಜಗದ ಜಾಣ ಜನರ
ಮಾಯೆಯ ಮಾತುಗಳ ಕೇಳುತ,
ನಕಲಿ ನಗುವಿನಲಿ ಹೂಂ ಉಹೂ
ಎನ್ನುತ, ಪಯಣ ಬೆಳೆಸಿದೆ ಮನ
ಎಲ್ಲೆ ತಿಳಿಯದ ತಿರುಕನಂತೆ

ಅರಿವಿಲ್ಲದೆ ಅರಳುವ ನುಡಿಸ್ವರಗಳ
ಅಡಗಿಸುತ,
ಭಾವನೆಗಳ ನೀರವತೆಯ ನಶೆಯಲಿ
ಮುನ್ನಡೆಯುತಿದೆ ಮನ,
ಯಾವುದೋ ಚಿತ್ತಾರವ ಚಿತ್ರಿಸುತಾ
ಭ್ರಾಮಕ ಬೀದಿಯಂಗಳದಲಿ

-


5 MAY 2021 AT 1:34

ಮೌನಿಯಾಗಿ ಕುಳಿತಿದೆ ಮನ
ಕಪ್ಪು ಕಡಲೊಂದರ ಮುಂದ

ಬಂಧಿಯಾಗಿದ್ದ ಭಾವವೊಂದು ನಯನದ
ಅಂಚಿನಿಂದ ಜಾರಿ ಸೇರಲೊರಟಿದೆ
ಸದ್ದಿಲ್ಲದೆ ಅಲೆಯೊಂದ

ಮಿಂಚಂತೆ ಬಂದ ನೆನಪೊಂದು
ಮಿಂದೆದ್ದಿದೆ ಭಾವ ಶರದಿಯೊಳು
ಧರಿಸಿ ನಿಶಬ್ದದ ಉಡುಗೆಯೊಂದ

ಮನದ ಚಿಪ್ಪಿನಲ್ಲಿ ಅಡಗಿದ್ದ
ಬೇಸರದ ಪದಗಳ ಸಾಲು ಸದ್ದಿಲ್ಲದೆ
ಜಾರಿವೆ ಬೆರಳ ತುದಿಯಿಂದ

ಕೊರಳ ದನಿಯು ಕಡಲ ತೀರದಲಿ ಕುಳಿತು
ಬಿಕ್ಕಳಿಸಿದೆ ಕಾಲಿ ಆಗಸವ ನೋಡುತ
ಕಳುವಾದ ಮುಗುಳು ನಗೆಯ ಹುಡುಕುತ

~~Latha ಸಿ




































-


26 APR 2021 AT 17:40

ನಮ್ಮದಲ್ಲದ ನಾಳೆ ಗಳಿಗೆ
ಜನಿಸಿದ ಊರ ತೊರೆದು
ಮನೆ ಮಂದಿಯ ಸಂಘ ತೊರೆದು
ಪ್ಯಾಟೆಯ ದಾರಿ ಹಿಡಿದು
ಕೆಲಸದ ಹುಡುಕಾಟದಲ್ಲಿ
ನೆಮ್ಮದಿಯ ಜೀವನ ಬದಿಗೆ ತಳ್ಳಿ
ಝಣ ಝಣ ಹಣವ ಪಡೆಯಲು
ಕಾಲಿಗೆ ಗಾಲಿಯಾಕಿ ಓಡುತಿರಲು

ಕಾಲವೇ ತಕ್ಕಡಿಯಲ್ಲಿ
ಸಂತಸದ ಮೂಟೆಯೊಂದ
ದುಡ್ಡಿನ ಗಂಟಿನೊಂದರ
ಕೂಡಿ ಕಳುಹಿಸಿದರು
ಆನಂದವ ನಿರಾಕರಿಸಿ
ಸಂಪತನ್ನ ಅರಸಿ ಬಯಸಿ
ನಗುವುದನ್ನೇ ಮರೆತಿವೆ
ಈ ಹುಚ್ಚು ಕೋಡಿ ಮನಸುಗಳು

-


29 OCT 2020 AT 22:39

ಮಾಗಿಯ ಸಮಯದಲಿ
ಮನದರಸಿಯ ಮುದ್ದಿಸಲು
ತುಷಾರನು ತಿಳಿ ಮುಂಜಾವಿನಲಿ
ತಡಮಾಡದೆಯಾಕುತ್ತಿದ್ದ ಹಾಜರು

ಪ್ರೀತಿಯಿಂದ ಪುಷ್ಪಳ ಮೊರೆಯೊರೆಸಿ
ಮನಸಾರೆ ಚುಂಬಿಸುತಾ
ಜಗವೇ ಕಣ್ಣರಳಿಸಿ ನೋಡುವಂತೆ
ಮಾಡುತ್ತಿದ್ದ ಕುಸುಮಳಿಗೆ ತಯಾರು

ಇಬ್ಬನಿಯ ಸೋಜುಗಾದ ಸ್ಪರ್ಶವು
ಸುಮಳಿಗೆ ಸ್ವರ್ಗ ಸಂತಸವ ನೀಡಿ
ನಲ್ಮೆಯ ಭಾವದಲಿ ನಲಿದಾಡಿಸಿ
ಮೂಡಿಸಿತು ನವ ಪ್ರೇಮದಳದ ಚಿಗುರು

ಒಂದೊಳ್ಳೆ ಪ್ರಾತಃ ಕಾಲದಲಿ
ಶೀಕರನ ಪ್ರೇಮ ನಿವೇದನೆಯಲಿ
ಅದಲು ಬದಲಾಯಿತು
ಇಬ್ಬನಿ- ಪುಷ್ಪದ ಹೃದಯ

-


11 OCT 2020 AT 12:31

ನಭೋಮಂಡಲವ ದರ್ಶಿಸುವ ನಿನ್ನ ನಯನಗಳು
ನೋಟದಲ್ಲೇ ನಶೆಯೇರಿಸಿದೆ ಸಖಿ
ಅಭಿಸಾರಿಕೆಯ ಕಿರುನಗೆಯ ಕಂಡ ಕಂಗಳು
ಕಂಗಾಲಾಗಿ ಕೂತಿವೆ ಅರಸಿ

ಝರಿಯಂತೆ ಜರಗುವ ಸಿಹಿ ಮಾತುಗಳ ಕೇಳುತ್ತಾ
ಹೃದಯವು ಪ್ರೀತಿಯ ಮತ್ತಲ್ಲಿ ಮುಳುಗೋಗಿದೆ
ಅತ್ಯಾಕರ್ಷಣೀಯ ಅದರಗಳ ನೋಡುತ್ತಾ
ಹೃದಯದ ಒಳಗೊಳಗೆ ಪ್ರೀತಿಯ ಜೊತೆಜೊತೆಗೆ ಏನೋ ಆಗಿದೆ

ಸುಮ್ಮನೆ ಬೀಸೋ ಗಾಳಿಯೆ ಪ್ರೇಮತರಂಗವ
ಮನದ ಬೀದಿಗೆ ತಂದ ರಾಯಭಾರಿಯಾಗಿದೆ
ರಂಭೆ ಮೇನಕೆಯೆ ಭುವಿಗಿಳಿದು ಬಂದು ನನ್ನ
ಮುಂದೆ ನಿಂತಂತೆ ಭಾಸವಾಗಿದೆ

ನಾಜೂಕಾಗಿ ನೀ ನಡೆದು ಬರುತಿರಲು ರಮಣೀಯ
ರಸಕಾವ್ಯವೊಂದು ಮನದಲ್ಲಿ ಚಿಮ್ಮುತ್ತಿದೆ
ಕಾರಣವಿಲ್ಲದೆ ಹೃದಯದಿ ಹೊಸ
ಪ್ರೇಮ ಕಾವ್ಯವು ಸಹಸ್ರ ಪುಟಗಳ ತುಂಬಿಸಿದೆ

ತುಸು ನೀ ಪಿಸು ಮಾತಾಡಿದಾಗ ಧರೆಗಿಳಿದ
ಮುತ್ತುರತ್ನಗಳು ಹೃದಯಕ್ಕೆ ಮುತ್ತಿಗೆಯಾಕಿವೆ
ಚೂರು ಸನಿಹ ನೀ ಬರಲು ನಾಡಿಯ ಮಿಡಿತವು
ಸಹ್ಯಾದ್ರಿಯ ಶಿಖರವನ್ನೇರಿದೆ

ತಿಳಿಯದೇ ಎನ್ನೆದೆಯಂಗಳದಿ ಪ್ರೇಮ ರಂಗೋಲಿಯ ನೀ ಬಿಡಿಸಿದೆ
ಒಮ್ಮೆ ಸಮ್ಮತಿಸಿ ಬಿಡು ಹೆಣ್ಣೇ
ನಿನ್ ತನುವ ಒಲವಿನ ಓಕುಳಿಯಲಿ
ತೇಲಾಡಿಸಲು ನಾ ತಯಾರಿರುವೆ ಹೆಣ್ಣೇ.


-


18 SEP 2020 AT 0:43

ನದಿಯೊಡಲಲಿ ತಾವರೆಯು
ಮೈಮರೆತು ಮಲಗಿದಾಗ
ಮುಂಜಾವಿನ ಮಡಿಲೊಳು ಕೇಳಿಸಿತು
ಕೋಗಿಲೆಯ ಕುಕಿಲರಾಗ

ತಂಪಾದ ತಂಗಾಳಿ ತಾವರೆಯ ಮೈಸವರಿ ಕೇಳಿತು-
"ಹೇ ಬಾಲೆ, ಕೇಳುವೆಯಾ?
ಗಗನಸಂಚಾರಿಣಿಯ ಸಿಹಿ ಕಂಠದೊಳು
ಉಡುರಾಜ-ನೀಲಸಾಗರಿಯ ಪ್ರೇಮ ಕಾವ್ಯವಾ?"

"ನಕ್ಷತ್ರಾಧಿಪತಿಯ ಒಲ್ಮೆಯೇ?" ಎಂದು
ತಾವರೆಯು ತಟ್ಟನೆ ಮೇಲೇಳಲು
ಕೋಗಿಲೆಯ ಸವಿಗಾನಕ್ಕೆ
ತಂಗಾಳಿ ಸೋನೆ ಹಿಮ್ಮೇಳ ಹಾಡಿದವು

ಕೇಳೇ ಕಮಲ, "ನಗುಮೊಗದ ಚಂದಿರನು
ಶರಧಿಯ ಸೌಂದರ್ಯಕ್ಕೆ ಶರಣಾಗಿ
ತಾರೆಗಳ ಮೂಗುತಿಯ ಬೆಳದಿಂಗಳ ಸೀರೆಯ
ಉಡುಗೊರೆಯ ನೀಡಿ , ನಾ ನಿನ್ನ ಪ್ರೇಮಿಸುವೆ
ನೀ ಸಮ್ಮತಿಸು " ಎಂದು ಬೇಡಿದನೆಂದಳು ಸಿಹಿ ಕಂಠದ ಒಡತಿ

ಪಂಕಜ ಮುಖವರಳಿಸಿ ಕುತೂಹಲದಿ , "ಸ್ನೇಹಿತೆ ಅಬ್ಧಿ
ಏನೆಂದಳು?" ಎನ್ನಲು
ಹೂಂ! ಹೂಂ! ಹೇಳುವೆ ಕೇಳು ಗೆಳತಿ ಎಂದು
ಕುಕಿಲರಾಗವ ಶುರುಮಾಡಿದಳು
(Read caption👇✍️)

-


5 SEP 2020 AT 9:43

ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ
ಸರಿ ದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು

ತಪ್ಪು ಮಾಡಿದಾಗ ಮಾತಲ್ಲೆ ಶಿಕ್ಷಿಸಿ ಕ್ಷಮಿಸಿ
ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕ ನೀವು

ಅಕ್ಕರೆಯಿಂದ ಅಕ್ಷರ ಕಲಿಸಿ ಜಗದ ಶ್ರೇಷ್ಠರ ವಿಚಾರ ತಿಳಿಸಿ
ನಾವು ಅವರಂತಾಗಬೇಕೇಂದು ಪ್ರೇರೇಪಿಸಿದವರು ನೀವು

ನುಡಿಯೊಂದಿಗೆ ಉತ್ತಮ ಮೌಲ್ಯಗಳನ್ನು ಪರಿಚಯಿಸಿ
ಬೋಧನೆಯ ಮೂಲಕ ಸಾಧನೆಯ ದಾರಿ ತೋರಿದವರು ನೀವು


ಪೋಷಕರಂತೆ ಪ್ರೀತಿ ತೋರಿ ಸ್ನೇಹಿತರಂತೆ ಜೊತೆಗೂಡಿ
ಪ್ರತಿ ಸೋಲು ಗೆಲುವಿನಲಿ ಧೈರ್ಯ ತುಂಬಿದವರು ನೀವು

ನಿಮಗುಂಟು ಎಣಿಕೆಗೆ ಸಿಗದ ಶಿಷ್ಯವೃಂದ
ಅದರಲ್ಲಿ ನಾನೊಂದು ಚುಕ್ಕಿ ಎಂಬುದು ಪರಮಾನಂದ

"*ಶಿಕ್ಷಕರ ದಿನಾಚರಣೆಯ ಶುಭಾಶಯಗಳು* "



-


Fetching Lipikaಸಿ Quotes