Geeta Huddar   (Geeta Huddar)
3 Followers · 1 Following

read more
Joined 26 January 2024


read more
Joined 26 January 2024
9 HOURS AGO

ನಗು ಒಂದು ಆಭರಣ
ಮೊಗದಲಿ ತಂದಿದೆ ಆಶಾಕಿರಣ
ನಗು ಒಂದು ಸುಂದರಕಿರಣ
ಜಗದಲಿ ರಾರಾಜಿಸುತಿದೆ ನಗು ಎಂಬ ಹೊಂಗಿರಣ
ಬಾನಲಿ ವಿಜೃಂಭಿಸುತ್ತಿದೆ ಮುಗಿಲೆಂಬ ಅಮೃತ ಸಿಂಚನ

ಈ ಮಾಯಾಜಾಲದಲಿ ನಗುವ ಸ್ನೇಹವ ಮಾಡುತ
ಪ್ರೀತಿಯ ನಗುವಿನ ಚಿಲುಮೆ ಹರಿಸುತ
ಭಗ್ನ ಪ್ರೇಮಿಯಂತೆ ನಗುವನ್ನೇ ಪ್ರೀತಿಸುತ
ನಗುವನ್ನೇ ಆಸ್ತಿಯಾಗಿಸಿ ಮೆರಗು ಮೂಡಿಸುತ
ಅಲಂಕಾರ ಇಲ್ಲದೆ ನಗುವನ್ನೇ ಒಡವೆ ಮಾಡಿಕೊಳ್ಳುತ್ತ
ನಗುವಿನರಮನೆಯ ಅಪೂರ್ವ ಗೊಂಬೆ ನಾನು

ಶೃಂಗಾರವೇ ನಾಚಿಕೊಳ್ಳುವಂತೆ ಮುಗುಳುನಗೆ ಬೀರುತ
ತುಟಿಯಂಚಲಿ ನಗುವಿನ ಸುರಿಮಳೆ ಸುರಿಸುತ
ನೋವೆ ಶರಣಾಗುವಂತೆ ನೋವಲು ಮಂದಹಾಸದಿ ನಗುತ
ಹಸನ್ಮುಖಿ ಮೊಗ ಕಂಡು ದ್ವೇಷ ಬದಲು ಪ್ರೀತಿಯಾಗುತ
ನಾ ಸುರಿಸುವ ಅಮೃತಧಾರೆಯಂತ ನಗುವಿಂದ ನನ್ನವರ ನೋವ ಮರೆಸುತ
ಸದಾ ನಗು ಮೊಗದ ಚೆಲುವೆ ನಾನು

ಮಿನುಗುತಾರೆ ಚುಕ್ಕೆ ನನ್ನ ನಗುವಿಗೆ ಅಸೂಯೆ ಪಡುತಾ
ನನ್ನೊಲಿವಿನ ನಗುವಿನ ಹೊನಲಿಗೆ ಚಂದ್ರ ಕೂಡ ನಸು ನಗುತ
ನಗುವಿನ ಪಲ್ಲಕಿಯಲ್ಲಿ ಮೆರೆಯುದ ಕಂಡು ಹಕ್ಕಿಗಳು ಅಸೆ ಪಡುತಾ
ನಗುವನ್ನೇ ಆಧಾರ ಮಾಡಿಕೊಂಡು ಎಲ್ಲರ ಕಣ್ಮನ ಸೆಳೆಯುತ
ನನ್ನ ನಗುವಿನ ಪ್ರೀತಿಗೆ ಪ್ರಕೃತಿ ಕಿರುನಗೆ ಬೀರುತ
ನಗುತ ಬಾಳುವ ಅಪರೂಪದ ನಗುವಿನ ಒಡತಿ ನಾನು

-


22 APR AT 19:46

ನೆನಪಿನಂಗಳದಿ ಮಳೆಹನಿಯಾಗಿ ಜಾರುತಿದೆ ಭಾವಬಿಂದು
ನವನವೀನ ಭಾವಗಳ ಸಮ್ಮಿಲನದಿ ನಗುತಿಹ ಇಂದು
ನಿನ್ನೊಲಿವಿಗಾಗಿ ಹಾತೊರಿಯುತಿಹ ಭಾವನೆಗಳು ಎಂದೆಂದೂ
ಮೊಗದಲಿ ನಗುವಿನ ಭಾವನೆಗಳ ಅಲಂಕಾರದ ಬಿಂದು
ಚಂದನದಿ ಧರೆಗಿಳಿಯುತಿಹ ಭಾವನೆಗಳ ಹನಿಯೊಂದು
ಚಲಿಸುವ ಮೋಡಗಳ ಮಧ್ಯೆ ಭಾವನೆಯ ಮಳೆಗೆ ಪ್ರಕೃತಿ ನಲಿಯಿತೆಂದು
ಬಾನಿಗೆ ಭಾವಬಿಂದು ನೀಡುತಿಹ ಸಿಹಿ ಮುತ್ತೊಂದು
ಭಾವನೆಗಳ ಮಳೆಹನಿ ಸುರಿದು ಮನದ ಮಡಿಲು ತಂಪಾಯಿತೆಂದು

ಮನದೊಳಗೆ ಭಾವನೆಗಳ ಚಿಟಪಟ ಸದ್ದಿನ ಮಳೆಯಂತೆ
ಭಾವಗಳ ಮಳೆಯಲಿ ನೆನೆದು ಮನವ ಅಪ್ಪಿ ತಬ್ಬಿದಂತೆ
ಭಾವಗಳ ಆಲಿಂಗನದಿ ಕಂಗಳು ನಕ್ಕು ನಲಿದು ಸಂತಸಗೊಂಡಂತೆ
ಮನದಿ ಮೋಡ ಕರಗಿ ಭಾವನೆಗಳ ಕಡಲ ಸೇರಿದಂತೆ
ಭಾವನೆಗಳ ಮಳೆ ಹನಿ ನೇಸರನ ಕಿರಣದಿ ಸಂಗಮವಾದಂತೆ
ಆಗಸದಿ ಭಾವನೆಯ ಒಲವಿನ ಕಾಮನಬಿಲ್ಲು ರಚನೆಯಾದಂತೆ
ಭಾವನೆಗಳ ಹನಿಗೆ ಮನ ಮಿಂದು ಕುಣಿದಾಡುವಂತೆ
ಮಳೆರಾಯ ಭಾವನೆಗಳ ಸೋಜಿಗಕೆ ನಾಯಕನಾದಂತೆ

ಸಾಗರದಿ ಭಾವನೆಗಳ ಬಚ್ಚಿಟ್ಟು ಮನದಲಿ ಕಂಬನಿ ಸುರಿಸಿದಂತೆ
ತೀರವ ಸೇರ ಬಯಸುವ ಅಲೆಗಳು ಭಾವವಾಗಿ ಹೊಮ್ಮುವಂತೆ
ಪ್ರವಾಹಕೆ ಅಳುಕದೆ ಭಾವನೆಗಳು ದುಮುಕುತಿಹ ಅಲೆಗಳ ಆಸರೆ ಬಯಸಿದಂತೆ
ಪ್ರೀತಿಯ ಭಾವದಲಿ ಕಡಲ ತೀರ ಸೇರುವ ತವಕದಲಿ ಚಡಪಡಿಸಿದಂತೆ
ಕನಸುಗಳ ಹನಿ ನನಸಾಗುವ ಭಾವದಲಿ ತನ್ನ ತಾ ಮರೆತಂತೆ
ಭಾವನಾ ಲೋಕದಿ ಭಾವಬಿಂದು ಹೃದಯದಿ ಸ್ಪರ್ಶಿದಂತೆ
ಅಂತರಾಳದಿ ಭಾವನೆಗಳ ಚಿಲುಮೆ ಕಾರಂಜಿಯಂತೆ ಚಿಮ್ಮುತಿಯಂತೆ
ಭಾವನೆಯ ಹನಿಗಳು ಸೇರುತಿವೆ ಭೋರ್ಗರೆವ ಕಡಲವಂತೆ

-


21 APR AT 12:49

ಬದುಕಿನ ದೋಣಿಯಲಿ ಭಾವಯಾನ
ಅಲೆಗಳಂತೆ ಧುಮುಕುವ ಮನದ ತರಂಗಯಾನ
ಮನದಾಳದ ಭಾವಗಳ ಸುರಿಮಳೆ ನವೀನ
ನಲುಮೆಯ ಭಾವದಲಿ ಒಲವಿನ ಪಯಣ
ಚಿಗುರೆಲೆಯಂತೆ ಚಿಗುರುತಿವೆ ಭಾವಗಳ ಮೌನ
ಮನದರಮನೆಯಲಿ ಭಾವನೆಗಳ ಕಡಲಿಗೆ ಆಗಮನ
ಭಾವನೆಗಳ ಬುತ್ತಿಯಲಿ ನಲಿವಿನ ಆಹ್ವಾನ

ಭಾವಾಂತರದೊಳಗಿನ ಕನಸಿನ ಭಾವ ಸುಂದರ
ಇಣುಕುತಿದೆ ಬಯಕೆಗಳ ಭಾವನೆಗಳ ಸಾರ
ಭರವಸೆಯ ಬದುಕಲಿ ಭಾವನೆಗಳ ನಿಲುವಿನ ಶಿಖರ
ಅರಳುವ ಪ್ರೀತಿಗೆ ಭಾವನೆಗಳು ತಬ್ಬಿವೆ ಪರಸ್ಪರ
ಕಲ್ಪನಾ ಲೋಕದಿ ಭಾವನೆಗಳ ಸೇರುತಿವೆ ಸರೋವರ
ನಿಲ್ದಾಣವಿಲ್ಲದೆ ಸಾಗುತಿದೆ ಭಾವಯಾನದ ಸಂಚಾರ
ಮನದ ಗೂಡಲಿ ಸಿಲುಕಿವೆ ಭಾವನೆಗಳೆಂಬ ಪಂಜರ
ಭಾವ ಹೃದಯಕೆ ನಾಟಿದೆ ಒಲವಿನ ನೋಟದ ಬಾಣ
ಪ್ರೀತಿಯ ಆಳದಲ್ಲಿ ಭಾವನೆಗಳ ಪಯಣ
ಮೌನದಲಿ ತುಡಿಯುತ ಭಾವಗಳ ಬಂಧನ
ಸ್ಪಂದಿಸುವ ಮನಕೆ ಭಾವಗಳ ಖುಷಿಯ ರಸದೌತಣ
ಧನ್ಯತಾ ಭಾವಕೆ ಮನಸ್ಸಾಯಿತು ಸಮಾಧಾನ
ಸಂತಸದಲಿ ಅರಳುತಿಹ ಭಾವನೆಗಳ ಹೂಮನ
ಭಾವಯಾನದಲಿ ಕೊಂಗೊಳಿಸುತಿಹ ನಯನ

ಮನದ ಅಂತರಂಗದಿ ಭಾವನೆಗಳ ಪ್ರತಿಧ್ವನಿ
ಕಂಗಳ ಸನ್ನೆಯಲಿ ಭಾವಯಾನದ ದೋಣಿ
ಭಾವಯಾನದ ಪಯಣದಲಿ ಪಯಣಿಗನಾದ ತರುಣಿ
ನೆನಪುಗಳ ಸರಮಾಲೆಯಲಿ ಭಾವನೆಗಳ ಮಣಿ
ಹೃದಯ ಮೀಟುತಿಹ ವೀಣೆಗೆ ಭಾವನೆಯೇ ರಾಣಿ
ಪ್ರೀತಿ ಚಿಲುಮೆಯಲಿ ಭಾವನೆಗಳು ಬಂಗಾರದ ಗಣಿ
ಸ್ನೇಹದಿ ಮನಗಳಿಗೆ ಭಾವಗಳ ಮಿಲನ

-


11 APR AT 22:39

ಬಾನಂಚಲಿ ಹಕ್ಕಿಯ ಕಲರವ
ಮುಂಜಾವಿನ ತಂಪು ತಂಗಾಳಿಗೆ ನೇಸರನು ಮುತ್ತಿಡುವ
ಚಿಲಿಪಿಲಿ ಹಕ್ಕಿಯ ಶಬ್ದಕೆ ಮನ ಮಿಡಿಯುವ
ಇಂಪಾದ ತಂಗಾಳಿಗೆ ತನು ಕುಣಿಯುವ
ಕೈಬೀಸಿ ಕರೆದಂತಿದೆ ಹಕ್ಕಿ ಸನಿಹವ - ಎದೆಗಂಟಿದ ನಿಶ್ಶಬ್ದದಿ ತಂಗಾಳಿಯು ಚಲಿಸುವ
ಮೂಕಪ್ರೇಕ್ಷಕನಾಗಿಸಿದ ಈ ಸುಮಧುರ ಅನುಭವ

ನಿರ್ಮಲ ನಿಸರ್ಗದಲಿ ಹಕ್ಕಿಗಳ ಹಾರಾಟ
ಆಗಸದಲ್ಲಿ ರಾಣಿಯಂತೆ ನಲಿವಿನ ಆರ್ಭಟ
ಮನ ಇಂಪಾಗಿಸುತ ಕಿವಿಗೆ ರಸದೂಟ
ಕುಹೂ ಕುಹೂ ಹಾಡಿತು ಕೋಗಿಲೆಯ ಕಂಠ
ಚಿವ್ ಚಿವ್ ಎಂದು ಗುಬ್ಬಿ ಮರಿಯ ಹುಡುಕಾಟ
ಹಕ್ಕಿಯಂತೆ ಹಾರುವುದು ಕಲಿತ ಗಾಳಿಪಟ
ತನುಮನ ಸೆಳೆಯುವಂತ ನಿನ್ನ ನೋಟ
ವಾದ್ಯ ಸಂಗೀತದ ನಾದವ ಮೀರಿಸುವ ಹಕ್ಕಿಯ ಕಲರವ ವಿಶಿಷ್ಟ
ಮುಂಜಾವಿನ ತಂಗಾಳಿ ಕೆನ್ನೆಗೆ ಮುತ್ತಿಟ್ಟಿ ಹೋದಂತೆ
ಮನದ ಗೂಡಿನಲಿ ನಿನ್ನದೇ ಮನೆ ಮಾಡಿದಂತೆ
ತಂಗಾಳಿಯ ನಾದಕೆ ಮನವು ತಂಪಾದಂತೆ
ಭೂರಮೆಗೆ ಒಲವು ಹೆಚ್ಚಾದಂತೆ
ಮುಸುಕಿನ ಮೋಡದಲಿ ನೇಸರ ನಾಚಿ ನಲುಗಿತಿರುವಂತೆ
ಮನದ ಮುಗಿಲೆಗೆ ನಾದಮಯ ಸಂಗೀತದಂತೆ
ಪಿಸುಗುಡುವ ನಿನ್ನ ಅನುರಾಗದಲಿ ಸ್ವರ ನಾನಾದಂತೆ

ತಂಗಾಳಿಯ ಕಲರವದಿ ಗಿಡಮರಗಳ ಅಪ್ಪುಗೆ ಬಯಸಿದಂತೆ
ವಿರಹ ವೇದನೆ ತಾಳದೆ ಗಿಡಮರಗಳು ನಲುಗಿದಂತೆ
ನೇಸರನ ಕಿರಣಗಳೇ ಹಸಿರನು ತಬ್ಬಿಕೊಂಡಿರುವಂತೆ
ಹೂವಿನ ದುಂಬಿಗೆ ಝೇಂಕಾರ ನಾದವಾದಂತೆ
ಹೃದಯದಿ ಮಧುರ ವೀಣೆ ನುಡಿಸಿದಂತೆ
ಕಣ್ಣ ಕಡಲಿಗೆ ಹಸಿರಿನ ಭಾವವೇ ಸಂಗೀತದಂತೆ
ಚಿಗುರೆಲೆಯ ಸ್ಪರ್ಶವೇ ಸರಿಗಮಪ ಸ್ವರದಂತೆ

-


9 APR AT 9:11

ಚೈತ್ರದ ಚಿಗುರು
ನವಚೈತನ್ಯ ಸಿಂಚನದ ಹಸಿರು
ಜಿಟಿಜಿಟಿ ಮಳೆಯಲಿ ಚಿಗುರುತಿದೆ ನವಿರು
ಧರೆಯಾಗಿದೆ ಚಿಗುರಿನ ಉಸಿರು
ಮಾಮರದ ಕೋಗಿಲೆ ಕೂಗಲು ತಯಾರು
ರಮಣಿಯದಿ ಚದುರುತಿದೆ ಚಿಗುರು

ನೇಸರನ ಕಿರಣಗಳಂತೆ ಪ್ರಕಾಶಿಸುತ
ಚೈತ್ರದ ಚಂದ್ರಮನಂತೆ ಬೆಳಕಾಗುತ
ಹಕ್ಕಿಗಳು ಕೋರುತಿದೆ ಸ್ವಾಗತ
ಮಳೆರಾಯನಿಗೆ ನಿನ್ನದೇ ಚಿತ್ತ
ಗಿಡಮರಗಳು ಸಂತಸದಿ ಕುಣಿದಾಡುತ
ಚಿಗುರೆಲೆ ಚಿಗುರುತಿರುವ ವಸಂತ

ಕಡಲಂತೆ ಸುಮಧುರ ನಿನ್ನ ಆಕೃತಿ
ಹೊಸ ಬದಲಾವಣೆ ತಂದ ಪ್ರಕೃತಿ
ಹಸಿರಿನಿ ಲೋಕದ ಕಲಾಕೃತಿ
ಚಿಗುರೊಡೆಯುವುದು ಭೂತಾಯಿ ಸಂಸ್ಕೃತಿ
ಚಿಗುರೆಲೆಯಾಗಿ ಗಿಡಮರವಾಗುವುದು ಚಿಗುರಿನ ಸುಕೃತಿ
ಹಸಿರಿನ ಗಿಣಿಮರಿಯಂತಿದೆ ನಿನ್ನ ಪ್ರೀತಿ

ಮನದಲಿ ಭಾವನೆಗಳ ಚಿಗುರು
ಬಾಳಿನ ಪಯಣದಲಿ ಹರಿದಾಡುತಿದೆ ಚಿಗುರಿನ ತೇರು
ಧರೆಯಲಿ ಬೆಳೆಯುತ್ತಿದೆ ಹೊಸ ಪೈರು
ಭೂಒಡಲಲಿ ಗಟ್ಟಿಯಾಗಿ ಅವಿತಿರುವ ನಿನ್ನ ಬೇರು
ಬಾನಗಲ ಪಸರಿಸಲಿ ನಿನ್ನ ಹಸಿರಿನ ಉಸಿರು
ಅಲಂಕಾರವೇ ಮೈದುಂಬಿಕೊಂಡಿರುವ ಚಿಗುರು

-


5 APR AT 11:07

ಭಾವಗೀತ
ಮೃದಲ ಮನವಿ ಹಾಡಿತು ಭಾವಗೀತ
ಭಾವನೆಗಳ ಸೋನೆಮಳೆ ಸುರಿಸುತ
ಬದುಕಿನ ಬವಣೆಯಲಿ ಭಾವನೆಗಳ ಸಂಗೀತ
ಹೃದಯದಿ ಒಲವಿನ ಪಲ್ಲವಿ ಹಾಡುತ
ನನ್ನೊಲುಮೆ ರಾಗ ನೀ ನುಡಿಸುತ
ಗಂಧರ್ವ ಗಾನದ ಚರಣ ಆಲಾಪಿಸುತ
ಮನದಿ ಭಾವನೆಗಳ ಲಹರಿ ಬರೆಯುತ
ಅನುರಾಗದಲಿ ಅನುಪಲ್ಲವಿಯ ಸಂಯೋಜಿತ

ನಲ್ಲನ ಕರೆಗೆ ಭಾವನೆಗಳ ಸ್ವರಗೀತ
ಪ್ರೀತಿ ಚಿಗುರುತ ಮನ ಕುಣಿಯುತ
ಭಾವನೆಗಳ ಹೊಸ ಕಲ್ಪಿಸುತ
ಮನದಲಿ ಭಾವಹೃದಯ ವೀಣೆ ಮೀಟುತ
ನಂದ ಕಿಶೋರನ ಕೊಳಲ ನಾದದಿ ರಾಧೆಯ ಮನ ಮಿಡಿಯುತ
ನಾಟ್ಯಮಯೂರಿಗೆ ಸಂಗೀತ ತಾಳ ಹಾಕುತ
ಭಾವನೆಗಳ ಸಾಹಿತ್ಯಕೆ ಮನ ಮೌನವಾಗುತ
ಅಂತರಂಗದಿ ಭಾವನೆಗಳ ಗುನುಗು ಜಿನುಗುತ

ಶ್ರುತಿ ಲಯದ ಭಾವದಲಿ ಗೀತ
ಅಕ್ಷರಗಳ ಸರಮಾಲೆಯ ಕವನದಲಿ ಭಾವನೆಗಳ ಮುತ್ತು ಪೋಣಿಸುತ
ಭಾವನೆಗಳ ಮಿಲನದಿ ಸಪ್ತಸ್ವರಗಳು ಒಂದಾಗುತ
ಮನದಿ ಮುದ ನೀಡುತ ಭಾವನೆಗಳ ಇಂಪಾಗಿಸುತ
ಸ್ವರದಲಿ ನಲುಮೆಯ ಭಾವ ಹುಡುಕುತ
ಬದುಕಿನ ನೋವು ನಲಿವು ಭಾವನೆಗಳ ಏರಿಳಿತ
ಭಾವನೆಗಳ ಕಾವ್ಯ ಭಂಡಾರ ರಚಿಸುತ
ಭಾವನೆಗಳ ಸಂಗಮ ಭಾವಗೀತ

-


4 APR AT 8:21

ಸಂಕ್ರಾಂತಿಯ ಎಳ್ಳು ಬೆಲ್ಲದ ಸಂಭ್ರಮ
ಹೋಳಿಯ ರಂಗು ರಂಗಿನ ಬಣ್ಣದೋಕಳಿಯ ಸಂಭ್ರಮ
ಯುಗಾದಿಯ ಬೇವು ಬೆಲ್ಲಿನ ಸಂಭ್ರಮ
ನಾಗಪಂಚಮಿಯ ಸಿಹಿ ಲಾಡಿನ ತೂಗುಯ್ಯಾಲೆ ಸಂಭ್ರಮ
ನವರಾತ್ರಿಯ ನವದುರ್ಗೆಯರ ಸಂಭ್ರಮ
ದೀಪಾವಳಿಯ ಪಟಾಕಿಯ ಸಂಭ್ರಮ
ಉತ್ಸಾಹದ ಚಿಲುಮೆಯಲಿ ನಲಿವಿನ ಸಂಭ್ರಮ

ಆಗಸದಲ್ಲಿ ಹಾರೋ ಹಕ್ಕಿಯ ಸಂಭ್ರಮ
ಪ್ರಕೃತಿಯ ಹಸಿರಲಿ ತರುಲತೆಯ ಸಂಭ್ರಮ
ಸಾಗರ ಸರೋವರದಲಿ ಧುಮುಕುವ ಅಲೆಗಳ ಸಂಭ್ರಮ
ಅರಳುವ ಹೂವಿನಲಿ ದುಂಬಿಯ ಸಂಭ್ರಮ
ಮಿನುಗುವ ತಾರೆಯ ಮಧ್ಯ ಚಂದ್ರನ ಸಂಭ್ರಮ
ಹರಿವ ನದಿಗೆ ಜುಳುಜುಳು ನಾದದ ಸಂಭ್ರಮ
ಆಹ್ಲಾದಕರ ಬಾಳದಾರಿಯಲಿ ಖುಷಿಯ ಸಂಭ್ರಮ
ಕಷ್ಟಗಳ ಜೀವನದಿ ಯಶಸ್ಸಿನ ಸಂಭ್ರಮ
ಬಯಕೆಗಳ ಗೂಡಿಗೆ ನನಸಾಗುವ ಸಂಭ್ರಮ
ಹೊಮ್ಮುವ ದೀಪಕೆ ಬೆಳಕಿನ ಸಂಭ್ರಮ
ತುಟಿಯಂಚಿನ ಮೌನಕೆ ಕಿರುನಗೆಯ ಸಂಭ್ರಮ
ಪುಟ್ಟ ಕಂದನಿಗೆ ತುಂಟಾಟದಲಿ ಸಂಭ್ರಮ
ಉಷೆಯ ಕಿರಣಗಳಿಗೆ ಪ್ರಕಾಶಿಸುವ ಸಂಭ್ರಮ
ಪುಟಿದೇಳುವ ಭಾವಗಳಿಗೆ ಒಲವಿನ ಸಂಭ್ರಮ

ಸಾಹಿತ್ಯ ಲೋಕದ ಕವಿಗೆ ಬರಹಗಳ ಸಂಭ್ರಮ
ಉರಿವ ಜ್ವಾಲೆಗೆ ಕಿಡಿಗಳ ಸಂಭ್ರಮ
ಇಂಪಾದ ಸಂಗೀತಕೆ ಸಪ್ತ ಸ್ವರಗಳ ಸಂಭ್ರಮ
ನಡೆವ ಕಾಲಿಗೆ ಸೊಗಸಾದ ನಾಟ್ಯದ ಸಂಭ್ರಮ
ಪ್ರೀತಿಯ ಹೃದಯಕೆ ಡಬ್ ಡಬ್ ಎದೆಬಡಿತದ ಸಂಭ್ರಮ
ಪ್ರಯತ್ನಗಳ ಹಾದಿಗೆ ಗೆಲುವಿನ ಸಂಭ್ರಮ
ಚಿಗುರುವ ಪ್ರೀತಿಗೆ ಒಂದಾಗುವ ಸಂಭ್ರಮ

-


3 APR AT 9:26

ಚೈತ್ರ ಮಾಸದ ವರುಷ
ಜೀವನದಿ ಚೆಲ್ಲಿದೆ ಹರುಷ
ಧರಿಣಿಯು ಬೀಗುತಿದೆ ಮಂದಹಾಸ
ಬಾಳ ನವೀನ ಉಲ್ಲಾಸ
ಬಾನಿಗೊಂದು ನವ ವಸಂತ

ಕೋಗಿಲೆಯ ಇಂಪಾದ ಸಂಗೀತ
ಮಾಮರದ ಚಿಗುರು ನವನವಿತ
ಹೊಂಗೆಯ ಕಂಪು ಬೇವಿನ ತಂಪು ಅದ್ಭುತ
ಹಕ್ಕಿಗಳ ಕಲರವಕೆ ಮನ ಕುಣಿಯುತ
ಚೈತ್ರದಿ ವಸಂತಲೀಲೆ ಹಾಡುತಿದೆ ನಗುತ
ನಲುಗುತ ಧರೆಗಿಳಿಯುತಿದೆ ಅಮೃತ

ಭಾವಗಳ ಚಿಗುರೊಡೆಯುತಿದೆ ಮನ
ಶೃಂಗಾರದಿ ನವೋಲ್ಲಾಸದಂತಿದೆ ಮನ
ಹೊಸ ಭರವಸೆಯ ಬಯಸುತಿದೆ ಮನ
ಚಿಗುರೆಲೆ ಕಂಡು ವಿಸ್ಮಯ ಈ ತನು ಮನ
ಪ್ರಕೃತಿಯ ಹಸಿರಿನತ್ತ ಸಾಗುತಿದೆ ಮನ
ಹಳೆಯ ಮರೆತು ಹೊಸದು ಪ್ರಾರಂಭಿಸಿದೆ ಮನ

ಪ್ರಕೃತಿಯ ಸೌಂದರ್ಯ ಆಹ್ಲಾದಕರ
ವಸಂತ ನೀಡುತಿದೆ ಗಿಡ ಮರ ಬಳ್ಳಿಗೆ ಹೊಸ ಆಕಾರ
ಚಿಗುರೆಲೆಗೆ ನೀನೆ ಆಧಾರ
ಝುಳು ಝುಳು ನಿನಾದಿಸುತಿದೆ ಸಾಗರ
ನವ ವಸಂತ ಕಟ್ಟುತಿದೆ ಭಾವನೆಗಳ ಹೊನ್ನಗೆಯ ಶಿಖರ
ನವ ಯುಗದ ನವ ಚೈತನ್ಯ ಸುಂದರ

-


1 APR AT 21:44

ಅಕ್ಕರೆಯ ಅಕ್ಕ ಸವಿಮಾತಿನ ಗೆಳತಿ
ಮನೆ ಮನದ ಯುವರಾಣಿ
ಮಮತೆಯ ಕಡಲು - ಸಹನೆಯ ಮೂರ್ತಿ
ನನ್ನೊಲವಿನ ದೇವ ಸಂಭೂತೆ

ತನ್ನೆಲ್ಲ ಪ್ರೀತಿ, ಕಾಳಜಿ ತ್ಯಾಗಮಾಡಿದ ಧರಿತ್ರಿ
ಮುದ್ದು ಮಾಡಿ ಪ್ರೀತಿ ತೋರಿಸುವ ಮೈತ್ರಿ
ಅಮ್ಮನಾಗಿ ಮಮತೆ ಮಡಿಲಲಿ ಮಲಗಿಸುವ ಧಾತ್ರಿ
ಚಂದ್ರನ ತೋರಿ ಕೈತುತ್ತ ನೀಡಿದ ಪುತ್ರಿ
ಅಂದದ ಅರಮನೆಯ ನಲಿವಿನ ನವರಾತ್ರಿ
ಜೋಗುಳ ಹಾಡು ಹೇಳಿ ಖುಷಿಪಡಿಸುವ ದಿಮಿತ್ರಿ
ಹಸನ್ಮುಖಿ ನೀ ಕಡಲ ಮುತ್ತು

ಹುಸಿ ಕೋಪದಲಿ ಅಪ್ಪುಗೆ ನೀಡುತ
ಮನಗಳು ಬೆಸೆದ ಬಂಧವಿದು ಶಾಶ್ವತ
ಬಾಂಧವ್ಯದ ಹೃದಯ ವೀಣೆ ನುಡಿಸುತ
ಕರುಳ ಬಳ್ಳಿಗಳ ಒಬ್ಬರಿಗೊಬ್ಬರ ಕಂಗಳ ಮಿಟುಕುತ
ನಿನ್ನ ಪ್ರೀತಿಗೆ ಸೋತು ಪುಟ್ಟ ಕಂದನಾಗುತ
ಮುಗ್ದ ಮನದ ನಿನ್ನ ಒಲವಿನ ಕಣ್ಮನ ಸೆಳೆತ
ಮಿಡಿವ ಹೃದಯದಿ ಸ್ಪಂದಿಸುವ ಪ್ರೀತಿ ದೇವತೆ

ನೋವಿನಲಿ ಸಾಂತ್ವನ ನೀಡುವ ನಿಷ್ಕಲ್ಮಶ ಮನ
ಹುಣ್ಣಿಮೆಯ ಬೆಳಕಿನಂತೆ ಹಸನಾದ ನಿನ್ನ ತನುಮನ
ಚಂದ್ರನ ಕಾಂತಿಯ ಮೀರಿಸುವ ನಿನ್ನ ನಯನ
ಮನೆಯ ನಂದಾದೀಪ ಬೆಳಗಿಸಿಹ ನಿನ್ನ ಗುಣ
ಒಂಟಿತನದಲಿ ಜೊತೆಯಾಗಿ ಕಷ್ಟಕೆ ಮಿಡಿಯುವ ನಿನ್ನ ಚಿಂತನ
ಅಪ್ಪ ಅಮ್ಮನ ಪ್ರೀತಿಗೆ ನಿನ್ನ ಪ್ರೀತಿ ಸಮಾನ
ಬಾಳದಾರಿಗುಂಟ ನೆರಳಾದ ಕಲ್ಪತರು ಅಕ್ಕ

-


31 MAR AT 22:15

ಮುಂಜಾವಿನ ಮುಸುಕಿನಲಿ ಅವಿತಿದೆ ಇಬ್ಬನಿ
ನವ್ಯಕಾವ್ಯದ ನವ ತಾರಿಣಿ
ಇಬ್ಬನಿಯ ತಂಪಿಗೆ ಇಂಪಾದ ಧರಣಿ
ಚುಮುಚುಮು ಚಳಿಯಲಿ ಇಬ್ಬನಿ ಕಂಡು ಆನಂದಿಸುತಿಹ ತರುಣಿ
ಕಡಲಲಿ ಇನಿಯನೊಂದಿಗೆ ಸಾಗುತಿದೆ ದೋಣಿ
ಒಲವಿನ ಪ್ರಿಯಕರನಿಗೆ ಬರೆಯುತಿಹ ಲಾವಣಿ
ಬಾನಿನ ಅರಮನೆಯಲಿ ಇಬ್ಬನಿಯೇ ರಾಣಿ

ಮುಂಜಾನೆಯ ಮಂಜಲಿ ಇಬ್ಬನಿಯ ಮಂಜರಿ
ಬೆಚ್ಚನೆ ಭಾವ ತಣ್ಣನೆಯ ಮೌನ ಬೀಸಿದ ವಯ್ಯಾರಿ
ನೇಸರನ ಸ್ವಾಗತಿಸಲು ನಿಂತ ಕುವರಿ
ಧರೆಯನು ಚುಂಬಿಸಲು ಕಾಯುತಿಹ ಕಿನ್ನರಿ
ಹಸಿರು ಗಿಡಗಳ ನರ್ತನದ ನಯನಮನೋಹರಿ
ಕಣ್ಮನ ಕಂಗೊಳಿಸುತಿಹ ಸುಂದರಿ
ಬಾನಂಚಲಿ ಬೆಳ್ಳಿ ಕಿರಣಗಳ ಲಾವಣ್ಯದ ಸಿರಿ
ನಿಸರ್ಗ ಲೋಕದಲಿ ಇಬ್ಬನಿಯ ಹೊಂಗಿರಣ
ಆಗಸದಿ ಮುಡಿಗೇರಿದೆ ಇಬ್ಬನಿಯೆಂಬ ಆಭರಣ
ಹಸಿರೆಲೆ ಮೇಲೆ ಚಿತ್ತಾರದ ಮಳೆಹನಿಯ ಆಕ್ರಮಣ
ಹೂವಿನ ದುಂಬಿ ಮೇಲೆ ನೀ ನಿಂತ ಸುಮಧುರ ಕ್ಷಣ
ಮನದಲಿ ಉಲ್ಲಾಸ ಚಿಗುರಿಸಿದ ಇಬ್ಬನಿಯ ತಲ್ಲಣ
ಬಾನಗಲ ಆವರಿಸಿಕೊಂಡಿದೆ ಇಬ್ಬನಿಯ ತಾಣ
ಭುವಿಯ ಸ್ಪರ್ಶಿಸಿ ಮುಗಿಲೆತ್ತರಕ್ಕೆ ಹೊರಟ ಇಬ್ಬನಿಯ ಪಯಣ

ಮುಸುಕಿನಲಿ ಖುಷಿಯಿಂದ ಇಬ್ಬನಿಯ ನರ್ತನ
ರಶ್ಮಿಯ ರಮ್ಯತೆಯಲಿ ಧರೆಗಿಳಿಯುತಿಹ ಇಬ್ಬನಿಯು ನವೀನ
ಹಿಮಕವಿದ ವಾತಾವರಣ ಸೃಷ್ಟಿಸಿದೆ ಇಬ್ಬನಿಯ ಆಗಮನ
ಹಕ್ಕಿಗಳು ಹಾರುವುದ ಮರೆಯಲು ಸೆಳೆಯುತಿಹ ಇಬ್ಬನಿಯ ಗಮನ
ಮೋಹಕ ತಾರೆಯಾಗಿ ಮಿನುಗುವ ನಿನ್ನ ತನುಮನ
ಉಷೆಗೆ ನೀಡುತಿಹ ಇಬ್ಬನಿಯ ಚುಂಬನ
ಅರೆಗಳಿಗೆ ಬಂದರೂ ಚಿರಕಾಲ ನಿನ್ನ ಗೆಳೆತನ

-


Fetching Geeta Huddar Quotes