ಡಾ. ಮಲ್ಲಿನಾಥ ಶಿ ತಳವಾರ   (✍️ರತ್ನರಾಯಮಲ್ಲ)
2.4k Followers · 25 Following

read more
Joined 11 May 2018


read more
Joined 11 May 2018

ಅತಿಯಾದ ಆಲೋಚನೆಗಳು ತಾರ್ಕಿಕ ಅಂತ್ಯದ ಬದಲಿಗೆ
'ಚಿಂತೆ'ಯ ಚಿತೆಯನ್ನು ಸಿದ್ಧಪಡಿಸುತ್ತವೆ
ಬದುಕಿನ ಜೀವಂತಿಕೆ ಇರುವುದೆ ಚಲನೆಯಲ್ಲಿ ಗಾಲಿಬ್
ನಿಂತ ನೀರಿಗೆ ಯಾವಾಗಲೂ ಪಾಚಿ ಕಟ್ಟುತ್ತದೆ

-



ಬಳಸಿಕೊಳ್ಳುವವರು ಇದ್ದಾರೆ ಇಲ್ಲಿ, ಎಚ್ಚರವಾಗಿರುವುದೇ ಸವಾಲಾಗಿದೆ
ಅನ್ಯರಿಂದ ಪಾರಾಗಬಹುದು ಜನಾಬ್ ನಮ್ಮವರಿಂದ ಸಾಧ್ಯವೇ ಇಲ್ಲ!!

-



ಕನ್ನಡಿ ಸುಳ್ಳು ಹೇಳಲ್ಲ ಅಂತಾರೆ ದೋಸ್ತ,
ಆದರೆ ಕನ್ನಡಿಯಲ್ಲಿ ಕಾಣೋದು ನಾವು ತೋರ್ಸಿದ್ದೆ ಅಲ್ವಾ
ನೆರಳು ಯಾವತ್ತೂ ಜೊತೆಯಲ್ಲೆ ಇರುತ್ತೆ ಅಂತಾರೆ,
ಒಮ್ಮೆ ಕತ್ತಲಲಿ ಅದನ್ನು ಹುಡುಕಿ ಕೊಡ್ತೀರಾ..?

-



ತಂತ್ರಜ್ಞಾನವು ಸತ್ಯ-ಮಿಥ್ಯಗಳ ನಡುವೆ
ಕಣ್ಣಾಮುಚ್ಚಾಲೆಯನು ಆಡುತ್ತಿದೆ ಗಾಲಿಬ್
ಸತ್ಯದ ಸಾಕ್ಷಾತ್ಕಾರ ಬಲು ದುಬಾರಿಯಾಗುತಿದೆ
ಎಲ್ಲದಕೂ ಬೆಲೆ ತೆತ್ತುವ ಕಾಲದಲ್ಲಿ

-



ಬರಹಗಾರರಿಂದ ಬರಹವನ್ನು ಗುರುತಿಸಲಾಗದು
ಬರಹದಿಂದ ಬರಹಗಾರರನ್ನು ಗುರುತಿಸಲಾಗುತ್ತದೆ

-



ಬರಹದಿಂದ ಬರಹಗಾರ ಶ್ರೇಷ್ಠರಾಗಲು ಸಾಧ್ಯ
ಬರಹಗಾರರಿಂದ ಬರಹವನ್ನು ಅಳೆಯಲಾಗದು

-



ಆಯಕಟ್ಟಿನ ಸ್ಥಳಗಳಲ್ಲಿ ಚುನಾವಣೆ ತಕ್ಕಡಿ ಹಿಡಿದು ನಿಲ್ಲದಿರಲಿ
ಮಾರಿಕೊಂಡ ಹಕ್ಕು ಗುಲಾಮಗಿರಿಯ ಭಾವವನ್ನು ಬಿತ್ತುತ್ತದೆ

-



ಸಿರಿತನದ ಅಂಗಳದಲ್ಲಿ 'ಸೋಮಾರಿತನ'ಕ್ಕೂ ಬೆಲೆಯಿದೆ ಗಾಲಿಬ್
ಬಡತನದ ಬೆವರಿನಲ್ಲಿ ಪಾಪ-ಪುಣ್ಯ ಗಳನ್ನು ಹುಡುಕುವವರಿದ್ದಾರೆ

-



'ಗೌರವ'ದಿಂದ ಹೊಟ್ಟೆ ತುಂಬುವಂತಿದ್ದರೆ ಎಷ್ಟು ಚೆನ್ನಾಗಿರುತಿತ್ತು
ಈ ದುನಿಯಾ ದುಡ್ಡಿನ ಹಿಂದೆ ಓಡುವುದು ತಪ್ಪುತ್ತಿತ್ತು ಗಾಲಿಬ್

-



ಧರ್ಮಗಳು ಸಾಮರಸ್ಯದ ಹಣತೆಯಾಗಬೇಕೆ ಹೊರತು
ನೆಮ್ಮದಿ ಕದಡುವ ಬೆಂಕಿಯಾಗಬಾರದು
'ರಾಜಕೀಯ' ಉಪ್ಪಿನಕಾಯಿ ಆಗಬೇಕೆ ಹೊರತು
ಬಾಳು ಮೂರಾಬಟ್ಟೆ ಮಾಡುವ ಅನ್ನವಾಗಬಾರದು

-


Fetching ಡಾ. ಮಲ್ಲಿನಾಥ ಶಿ ತಳವಾರ Quotes