ಅರ್ಪಿತಾ M K   (Arpitha. M. K)
908 Followers · 928 Following

Student
Lives in mangalore
Joined 31 January 2020


Student
Lives in mangalore
Joined 31 January 2020
26 JAN 2022 AT 12:11

ಸ್ವರಾಕ್ಷರಗಳಲ್ಲಿ ಮಾತೇಯ ಪ್ರತಿರೂಪ🙏

ಅ - ಅಂಧಕಾರವ ಸರಿಸಿ
ಆ - ಆಕಾಶದೆತ್ತರಕ್ಕೆ ಕನಸು ಕಟ್ಟಿ
ಇ - ಇಳೆಯ ಬೆಳಗಿಸಲೆಂದು
ಈ - ಈಕೆ ನನ್ನ ಧರೆಗಿಳಿಸಿದ ದೇವತೆ
ಉ - ಉಡುಗೊರೆಯ ರೂಪದಿ ಮಗುವನ್ನು
ಊ - ಊಹಿಸಿ
ಋ - ಋಣಾನುಬಂಧದ ಸಂಕೇತವಾಗಿ
ಎ - ಎದೆಗಪ್ಪಿ
ಏ - ಏದುಸಿರು ಬಿಟ್ಟು
ಐ - ಐಶ್ವರ್ಯವೇ ಮಗುವೆಂದು
ಒ - ಒಲವಿನಿಂದ
ಓ - ಓಲೈಸುತಲಿ
ಔ - ಔದಾರ್ಯದಿ
ಅಂ - ಅಂಬರದತ್ತ ನೋಡುತ
ಅಃ - ದುಃಖವ ಮರೆತು ಸಂತೋಷದಿಂದಿರುವಳು😘😇🙏

-


4 SEP 2021 AT 22:24

ಪಿತೃಭಿಃ ತಾಡಿತಃ ಪುತ್ರಃ
ಶಿಷ್ಯಸ್ತು ಗುರುಶಿಕ್ಷಿತಃl
ಘನಾಹತಂ ಸುವರ್ಣಂ ಚ
ಜಾಯತೇ ಜನಮಂಡನಮ್ll

ತಂದೆಯಿಂದ ಹೊಡೆಸಿಕೊಂಡ ಮಗ ..!!
ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ..!!
ಸುತ್ತಿಗೆಯ ಏಟು ತಿಂದ ಕಬ್ಬಿಣ..!!
ಲೋಕದಲ್ಲಿ ಬೆಳಗುವುದು ನಿಶ್ಚಿತ..!!
ಎಂಬ ಜ್ಞಾನದ ನುಡಿಗಳಾಡುತ್ತಾ ನನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸಲು ಇಚ್ಚಿಸುವೆ....

ಎಲ್ಲ ಶಿಕ್ಷಕರ ಅಡಿದಾವರೆಗಳಿಗೆ ನಮಿಸುತ್ತಾ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ. ವ್ಯಕ್ತಿತ್ವಕ್ಕೆ ಧರ್ಪಣ ಹಿಡಿದು ,ವ್ಯಕ್ತಿತ್ವ ನಿರ್ಮಾಣಕ್ಕೆ ಜೀವನ ಸಂದೇಶ ನೀಡಿ, ಬಂಗಾರದ ಬದುಕಿಗೆ ದಾರಿದೀಪವಾಗಿ ,ತೆರೆದ ಬಾಗಿಲಿಗೆ ಜ್ಞಾನವಾಗಿ ,ಜ್ಞಾನ ಸುಧೆಯಾಗಿ ಸಲುಹಿ, ಸುಜ್ಞಾನದ ಬಂಧುವಾಗಿ, ಜ್ಞಾನದ ಆಗರವಾಗಲು ಸಲುಹಿದ ಶಿಕ್ಷಕ ವೃಂದದವರಿಗೆ ಅಭಾರಿಯಾಗಿರುತ್ತೇನೆ.

ದಾನ ದಾನಗಳಲ್ಲಿ ಶ್ರೇಷ್ಠ ದಾನವಾದ ಜ್ಞಾನವೆಂಬ ಬೀಜವ ಬಿತ್ತಿ ವಿದ್ಯಾರ್ಥಿಗಳ ಬಾಳ ಬೆಳಗಿಸಲು ದಾರಿದೀಪವಾದ ನನ್ನ ಶಿಕ್ಷಣದ ಪಾಲುದಾರರಾಗಿ ಕಾರ್ಯನಿರ್ವಹಿಸಿದ ಎಲ್ಲಾ ಶಿಕ್ಷಕ ವೃಂದದವರಿಗೂ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸಲು ಬಯಸುವೆ.

ವಿದ್ಯಾರ್ಥಿಯ ಬಾಳಲ್ಲಿ ಅಜ್ಞಾನವ ಹೊಗಲಾಡಿಸಿ, ಆತ್ಮವಿಶ್ವಾಸ ಕಳೆದುಕೊಳ್ಳುವ ಸಮಯದಲ್ಲಿ ಜ್ಞಾನದ ದೀವಿಗೆಯನ್ನು ಹೊತ್ತಿಸಿ,ನಂಬಿಕೆ,ಆತ್ಮವಿಶ್ವಾಸದ ಅಡಿಪಾಯವನ್ನು ಹೂಡಿ ಜ್ಞಾನ ಸರಸ್ವತಿಯ ಮಡಿಲೇರಿಸಿ, ಉತ್ತಮ ಪ್ರಜೆಗಳನ್ನಾಗಿ ಮಾಡಿ ಬೆಂಬಲಿಸಿರುವಿರಿ.

ವಿದ್ಯಾರ್ಥಿಯೆಂಬ ಹಣತೆಗೆ ಎಣ್ಣೆ ಎಂಬ ಜ್ಞಾನವ ಎರೆದು ಪ್ರಕಾಶಮಾನವಾದ ಬೆಳಕು ಎಲ್ಲಡೆ ಪಸರಿಸುವ ಎಲ್ಲ ಶಿಕ್ಷಕರಿಗೂ ಮಗದೊಮ್ಮೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
💐😊💐
✍️ಅರ್ಪಿತಾ.

-


14 AUG 2021 AT 22:32

🙏ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.🙏
ಶತಮಾನಗಳಿಂದ ಬ್ರಿಟಿಷರ ವಿರುದ್ದ ಸೆಣಸಾಡಿ ಭಾರತದಲ್ಲಿ ಬ್ರಿಟಿಷರ ಅಧಿಪತ್ಯವನ್ನು ಕೊನೆಗಾಣಿಸಿ ಬ್ರಿಟಿಷರ ದಾಸ್ಯದಿಂದ ಮುಕ್ತಿಯನ್ನು ಪಡೆದು ದೇಶವನ್ನು ಸ್ವತಂತ್ರವನ್ನಾಗಿಸಿ ಇಂದಿಗೆ ಸರಿಯಾಗಿ ೭೫ ವರ್ಷಗಳು ಸಂಧಿವೆ.ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ದಿನವಾಗಿದೆ.ಪಂಜರದಲ್ಲಿನ ಹಕ್ಕಿಯನ್ನು ಬಿಡುಗಡೆಗೊಳಿಸಿದಂತೆ ಭಾರತೀಯರನ್ನ ಸ್ವತಂತ್ರರನ್ನಾಗಿಸಿದ ದೇಶಕ್ಕಾಗಿ ಪ್ರಾಣತ್ಯಾಗ ಮಡಿದ ವೀರಯೋಧರಿಗೂ ಹಾಗೂ ಹೋರಾಟಗಾರರಿಗೂ ಹೃತ್ಪೂರ್ವಕ ಧನ್ಯವಾದಗಳು.....

✍️✍️ಅರ್ಪಿತಾ

-


3 AUG 2021 AT 19:26

*ಮೌನಿ* *ಮನಸು*


ಜೀವನದ ಅಂತ್ಯವ ಬಯಸುತಿದೆ ಈ ಮನ
ಮರಳಿ ಆ ಸಂತೋಷವ ಕಾಂಬೆನೆಂಬ ನಂಬಿಕೆಯೊಳ್ ಉಸಿರಿನ್ನು ಪ್ರಕೃತಿಯ ಮಡಿಲಲ್ಲಿರುವುದು
ಈ ಜಗವ ಬಿಟ್ಟು ಅಲುಗಲು ಪ್ರಯತ್ನಿಸಿದರೂ ಕೆಲವು ಭಾವನೆಗಳು ಅಡ್ಡಿಯಾಗಿಹುದು
ಎಲ್ಲದರಲ್ಲೂ ವಿಫಲತೆಯ ಕಂಡ ಈ ಮನ ಜೀವದಿಂದ ತೇರ್ಗಡೆ ಹೊಂದಲು ವಿಫಲವಾಗುತಿಹುದು
ಉಸಿರ ನಿಲ್ಲಿಸಲು ಸಫಲತೆಯ ಕಾಣದ ಈ ಮನ ಜಲದಿಂದಿಚೆಯಿದ್ದ ಮತ್ಸ್ಯದಂತಾಗಿದೆ😭😭😢😢😑😑😑😑


✍️

-


9 JUL 2021 AT 6:59

ಪರಿಸ್ಥಿತಿಗಳ ಅರಿವು ಮೂಡಿಸಿ,ನೊಂದ ಮನಸಿಗೆ ಸಾಂತ್ವನ ನೀಡುವ ಜೊತೆಗಾರ.

-


2 JUL 2021 AT 9:56

ಗಂಡು ಮೆಟ್ಟಿದ ನಾಡು,ವೀರ ಕಲಿಗಳ ಬೀಡು,
ರಾಜ್ಯದ ಎರಡನೇ ರಾಜಧಾನಿ,ಕನ್ನಡಿಗರ ನಾಡು
ನಮ್ಮ ಹೆಮ್ಮೆಯ ಕುಂದಾನಗರಿ ಬೆಳಗಾವಿ😊🔥🔥💛❤️

-


1 JUL 2021 AT 11:16

ಅವಳು ಕೈಗೆಟುವ
ನೋಟದಲಿ ,
ಕೈಗೆ ಸಿಗದಂತಿರುವ
ಗಗನ😇

-


1 JUL 2021 AT 11:12

ಅವಳೊಂತರ 20-20 ಬಿಸ್ಕೆಟ್ ಇದ್ದಂಗೆ ಯಾವಾಗ್ಲೂ ಸಿಹಿಯಾಗಿ,ಪ್ರೀತಿ ಬಾಂಧವ್ಯದೊಂದಿಗಿರುತ್ತಾಳೆ.😊😁😍

-


29 JUN 2021 AT 10:38

ಹುಡುಗ ಬಿಟ್ಟೊಗ್ತಾ ಇದಾನೆ ಅಂತ ಗೊತ್ತಿದ್ದು,
ಸದಾ ಅವನ ನೆನಪುಗಳನ್ನು ಮೆಲುಕು ಹಾಕುತ್ತ ಅವನ ಬರುವಿಕೆಗಾಗಿ ಹಂಬಲಿಸುವಳು ಹುಡುಗಿ . ಅದೇ ಹೆಣ್ಣಿನ ಸಹಜ ಮನೋಭಾವನೆ.

-


27 JUN 2021 AT 12:48

ಇಂದೇನೋ ವಿಶೇಷವಾಗಿದೆ,
ಕಾರಣ ಎಂದಿಂಗೂ ಎನಿಸಲಾಗದ ದಿನಗಳೆಲ್ಲವೂ ಜರುಗುತಿವೆ.
ಇದರಲ್ಲೂ ನಾನಂತು ಕನಸಲ್ಲಯು ಎನಿಸಿದ ಈ ದಿನ ,ಅದೇನೆಂದರೆ ಪರೀಕ್ಷೆಗಳನ್ನು online ಮೂಲಕ ಬರೆಯುವುದು😂😁
Online ಪರೀಕ್ಷೆಯು ತುಸು ಸಮಂಜಸವಾಗಿದ್ದು,ತಲೆಗೆ ಹುಳ ಬಿಡುವ ಕಾರ್ಯವನ್ನು ಮಾಡುತಿಹುದು,,,,
ಬಯಸದೆ ಬಂದ ಈ ದುರ್ದಿನ ದೂರವಾಗಿ ಹೊಸಕಾಲ ಮೂಡಿಬರಲಿ😇

-


Fetching ಅರ್ಪಿತಾ M K Quotes