Amar Gudge   (ಗುಡ್ಗೆಪೋರ)
1.2k Followers · 134 Following

read more
Joined 18 February 2020


read more
Joined 18 February 2020
YESTERDAY AT 9:16

ಕಣ್ಣೀರು ಬರುವುದಕೆ ಕಾರಣ ಅವಮಾನ
ಸಂಬಂಧ ಕೆಡಲು ಕಾರಣವು ಅನುಮಾನ
ಪರಿಸ್ಥಿತಿ ಬದಲಿಸಲು ಮುಖ್ಯ ಸುದೃಢ ಮನ
ನಾನು ಬದಲಾಗಲು ಬೇಕಿದೆ ಸ್ವಾಭಿಮಾನ

-


9 AUG AT 19:14

ರಾಖಿಯ ಈ ದಾರವು ನಮ್ಮ ನಡುವಿನ
ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಸಂಕೇತ
ನಗುವಿಗೂ ಅಳುವಿಗೂ ಸಾಕ್ಷಿಯಾಗಿರುವ
ಮಧುರವಾದ ನಮ್ಮಿಬ್ಬರ ಅನುಬಂಧ ಶಾಶ್ವತ

-


9 AUG AT 16:59

ನಿನ್ನ ನಗುವೇ ನನ್ನ ಬದುಕಿಗೆ ಬಲ
ಬೆಲೆಕಟ್ಟಲಾಗದ ನಿಧಿ ನೀ ಅಮೂಲ್ಯ
ದೇಹ ದೂರವಿದ್ದರೂ ಬಂಧ ಪ್ರಬಲ
ಅಕ್ಕ/ತಂಗಿಗೆ ಈ ಸುದಿನದ ಶುಭಾಶಯ

-


8 AUG AT 20:36

ಕಣ್ಣಿಗೂ ಕಣ್ಣೀರಿಗೂ ಕದನ
ಮನಸಿಗೂ ಕನಸಿಗೂ ದುಮ್ಮಾನ
ವದನಕೂ ವಚನಕೂ ಗೊಂದಲ
ವ್ಯಕ್ತಿಯು ವ್ಯಕ್ತಿತ್ವವು ನಿರ್ಬಲ

-


8 AUG AT 20:25

ಸ್ತ್ರೀಯರ ಶ್ರದ್ಧೆ ಸಾಂಸ್ಕೃತಿಕ ಮೌಲ್ಯ ಹಾಗೂ ಕುಟುಂಬದ ಒಗ್ಗಟ್ಟಿನ ಪ್ರತಿಬಿಂಬ
ಐಶ್ವರ್ಯ, ಆರೋಗ್ಯ, ಸಂತಾನ, ಧರ್ಮ, ಧೈರ್ಯ, ಧಾನ್ಯ, ಜಯ ಮತ್ತು ವಿದ್ಯೆ ಎಂಬ ಅಷ್ಟ ಲಕ್ಷ್ಮೀಯರ ಕೃಪೆ

-


7 AUG AT 15:30

ಆತ್ಮವಿಶ್ವಾಸದ ಪೆನ್ನಿಗೆ ಸಕಾರಾತ್ಮಕ ಚಿಂತನೆಯ ಇಂಕನ್ನು ತುಂಬಿದಾಗ ನಿನ್ನೊಳಗಿನ ಕಲಾಕಾರನಿಂದ ಸುಂದರ ಬದುಕು ರೂಪುಗೊಳ್ಳುತ್ತದೆ.

-


4 AUG AT 22:06

ಅಹಂಕಾರ ಖಾರವಾಗಿ
ಅಂತಸ್ತು ಅಸ್ತವಾಗಿ
ನಿರೀಕ್ಷೆ ನಿರ್ನಾಮವಾಗಿ
ಮಮಕಾರ ಮಧುರವಾಗಿ
ಬಂಧನ ಭವ್ಯವಾಗಿ
ಹಗೆತನ ಹರಿದುಹೋಗಿ
ಅನುಪಮ ಅನುಬಂಧದ
ಗೆಳೆತನ ಶಾಶ್ವತವಾಗಿರಲಿ

-


1 AUG AT 18:28

ಶ್ರದ್ಧೆ, ಶ್ರಮ, ನಂಬಿಕೆ, ಪ್ರಯತ್ನವೆಂಬ ಹೆಜ್ಜೆಗಳಿಂದ ಬೆಳವಣಿಗೆಯ ಹಾದಿಯಲ್ಲಿ ನಡೆದಾಗ ಯಶಸ್ಸಿನ ನಿಲ್ದಾಣ ಸಿಗುವುದು.

-


1 AUG AT 14:18

ನಂಬಿಕೆ ಮತ್ತು ಆತ್ಮವಿಶ್ವಾಸವೆಂಬ ಗಾಲಿಗಳಿಂದ ಧೈರ್ಯವೆಂಬ ಸಾರಥಿ ಮುನ್ನಡೆಸುವ ಜೀವನವೆಂಬ ರಥ ಯಶಸ್ಸಿನತ್ತ ತಲುಪುವುದು.

-


31 JUL AT 19:07

ಅವಳೆಂದರೆ...
ನಂಬಿಕೆಗಳನ್ನು ಹಸಿರಾಗಿಸಿದವಳು,
ಉಸಿರಾದವಳು

-


Fetching Amar Gudge Quotes