ಮಾರ್ಚ್ ಎಂಡ್ ಬಂದರೆ ರಾದ್ಧಾಂತ ಕಂಪನಿಯಲ್ಲಿ ಇಲ್ದೆ ಇರೋದೆಲ್ಲ ಹೇಳ್ತಾರೆ ಸಿದ್ಧಾಂತ ಪ್ರತಿ ಸ್ಟಾಕ್ ಚೆಕ್ ಆಗ್ಬೇಕು ಹಂತ ಹಂತ ಮಾತಾಡೊಂಗಿಲ್ಲ ಫ್ರೆಂಡ್ಸ್ ಜೊತೆ ಕುಂತ ೧೫ ದಿನ ನಮಗೆ ಟಾರ್ಚರ್ರು ಈ ಸ್ಟಾಕ್ ಚೆಕ್ಗೆ ಕಂಡಿಡಿದವರ್ಯಾರು ಬೀಸಾಕಿದ್ದು ಹುಡುಕಬೇಕು ಉಪಯೋಗಿಸಿದ್ದು ಬರೀಬೇಕು ಅಲ್ಲಿ ಇಲ್ಲಿ ಎಷ್ಟಂತ ನೋಡೋದು ಟೈಮಂತೂ ಸಾಲವಲ್ದು ಕೊಡಲೇ ಕೆಣಕಿದವರಿಗೊಂದು ಗುದ್ದು ಬೇಡ ಅನ್ನ ಹಾಕಿದ್ದರೆ ಎಂದಿದೆ ಮನ ಪೆದ್ದು ಸದ್ಯ ಕಳೆಯಲಿ ಬೇಗ ಈ ತಿಂಗಳು ಎಷ್ಟು ಶಪಿಸುತ್ತವೊ ನನ್ನಂತ ಮನಗಳು